Ekka Movie : ಕೇವಲ ದೊಡ್ಮನೆ ಹುಡುಗ ಯುವರಾಜ್ ಕುಮಾರ್ ಇದೀಗ ನಿನ್ನೆ ಬಿಡುಗಡೆಯಾಗಿರುವ ಎಕ್ಕ ಸಿನಿಮಾದಲ್ಲಿ ಯುವ ನಟನಾಗಿಯೂ ಗೆದ್ದಿದ್ದಾರೆ. ಈ ಸಿನಿಮಾದ ಬ್ಯಾಂಗಲ್ ಬಂಗಾರಿ ಸಾಂಗ್ ಅಂತು ಸೂಪರ್ ಹಿಟ್ ಆಗಿದೆ. ಹಾಗಿದ್ರೆ ಮೊದಲ ದಿನ ಈ ಸಿನಿಮಾ ಗಳಿಸಿದ್ದೆಷ್ಟು?
ಮೊದಲ ದಿನ ಎಕ್ಕ ಸಿನಿಮಾ 2 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಸದ್ಯದ ಮಟ್ಟಿಗೆ ಇದು ಉತ್ತಮ ಗಳಿಕೆಯೇ. ಕನ್ನಡ ಚಿತ್ರರಂಗದಲ್ಲಿ ಸಿನಿಮಾ ರಿಲೀಸ್ ಆಗದೇ ಸೊರಗಿ ಹೋಗಿತ್ತು. ಆದರೆ ಈಗ ಎಕ್ಕ ಗೆಲುವಿನ ಸೂಚನೆ ನೀಡಿದ್ದು ನಿರ್ಮಾಪಕರಲ್ಲಿ ಹೊಸ ಭರವಸೆ ಮೂಡಿಸಿದೆ. ಇನ್ನೀಗ ಮುಂದಿನ ತಿಂಗಳಿನಿಂದ ಸ್ಟಾರ್ ಸಿನಿಮಾಗಳು ಬಿಡಗಡೆಯಾಗಲಿದ್ದು ಚಿತ್ರರಂಗ ಚೇತರಿಕೆಯ ನಿರೀಕ್ಷೆಯಲ್ಲಿದೆ.
ಅಂದಹಾಗೆ ನಿನ್ನೆ ಬೆಳಗ್ಗೆ ಹಾಗೂ ಮಧ್ಯಾಹ್ನದ ಪ್ರದರ್ಶನಗಳಿಗಿಂತ ರಾತ್ರಿ ಪ್ರದರ್ಶನಗಳಿಗೆ ಭರ್ಜರಿ ರೆಸ್ಪಾನ್ಸ್ ಬಂದಿದ್ದು, ಎಕ್ಕ ಮೊದಲ ದಿನವೇ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿದೆ. ವರ್ಷಪೂರ್ತಿ ಜನರನ್ನೇ ಕಾಣದ ಅದೆಷ್ಟೋ ಕುರ್ಚಿಗಳಿಗೆ ಕೆಲಸ ಸಿಕ್ಕಂತಾಗಿದೆ. ಹೀಗೆ ಮೊದಲ ದಿನವೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ಎಕ್ಕ ಬಾಕ್ಸ್‌ಆಫೀಸ್‌ನಲ್ಲೂ ಒಳ್ಳೆಯ ಗಳಿಕೆ ಕಂಡಿದೆ.
