Anushree: ಆಂಕರ್ ಅನುಶ್ರೀ ವಿವಾಹ ಆಗಸ್ಟ್ 28ರಂದು ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಅನುಶ್ರೀ ಅವರಿಗೂ ರೋಷನ್‌ಗೂ ಪರಿಚಯ ಬೆಳೆದಿದ್ದು ಹೇಗೆ ಎನ್ನುವುದಕ್ಕೆ ಉತ್ತರ ದೊರಕಿದೆ.
ರೋಷನ್ -ಅನುಶ್ರೀ ಭೇಟಿಗೆ ಕಾರಣ ಆಗಿರುವುದು ಅಪ್ಪು ಎಂದು ವರದಿಯಾಗಿದೆ. ಅಪ್ಪು ಅಭಿಮಾನಿಯನ್ನೇ ವಿವಾಹ ಆಗುತ್ತಿದ್ದಾರೆ. ಪುನೀತ್ ನಿವಾಸದಲ್ಲಿ ಅನುಶ್ರೀ ಹಾಗೂ ರೋಷನ್ ಪರಿಚಯವಾಗಿದ್ದಾರೆ. ಪುನೀತ್ ನಿರ್ಮಿಸಿದ ʼಗಂಧದ ಗುಡಿʼ ಡಾಕ್ಯುಮೆಂಟರಿ ಪುನೀತ್ ನಿಧನದ ನಂತರ ಇದು ರಿಲೀಸ್ ಆಯಿತು. ಇದರ ಪ್ರಿ ರಿಲೀಸ್ ಈವೆಂಟ್‌ನ ಪ್ಯಾಲೇಸ್ ಗ್ರೌಂಡ್‌ನಲ್ಲಿ ʼಪುನೀತ ಪರ್ವʼ ಹೆಸರಲ್ಲಿ ಅಶ್ವಿನಿ ಅವರು ಆಯೋಜನೆ ಮಾಡಿದ್ದರು. ಇದರಲ್ಲಿ ಚಿತ್ರರಂಗದ ಹಲವು ಮಂದಿ ಭಾಗಿ ಆಗಿದ್ದರು. ಈ ಈವೆಂಟ್‌ಗೆ ಆಂಕರಿಂಗ್ ಅನುಶ್ರೀ ಮಾಡಿದ್ದು, ಈ ಈವೆಂಟ್‌ನ ನಿರ್ವಹಣೆಯನ್ನು ರೋಷನ್ ಮಾಡಿದ್ದರು. ಇಲ್ಲಿ ಇವರಿಬ್ಬರ ನಡುವೆ ಆಪ್ತತೆ ಬೆಳೆದಿದೆ.
ಇಬ್ಬರ ಮಧ್ಯೆ ಈಗ ಗಾಢತನ ಬೆಳೆದು ವಿವಾಹದ ಹಂತಕ್ಕೆ ಬಂದಿದೆ. ಗುರು ಹಿರಿಯರ ಸಮ್ಮುಖದಲ್ಲಿ ಆಗಸ್ಟ್ 28 ರಂದು ಇವರ ಮದುವೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Male mahadeshwara: ಮಲೆ ಮಹದೇಶ್ವರನಿಗೆ ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ!
