Home » Viral Video : ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ- ರಕ್ಷಿಸುವುದು ಬಿಟ್ಟು ನಗುತ್ತಾ ಕೂತ ನಾಯಿ ಮಾಲೀಕ !!

Viral Video : ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ- ರಕ್ಷಿಸುವುದು ಬಿಟ್ಟು ನಗುತ್ತಾ ಕೂತ ನಾಯಿ ಮಾಲೀಕ !!

0 comments

Viral Video : ಇಲ್ಲೊಬ್ಬ ಅಸಾಮಿ, ಬುದ್ದಿ ಇಲ್ಲದ ಪಟಿಂಗ ತನ್ನ ಅಪಾಯಕಾರಿಯಾದ ತನ್ನ ಪಿಟ್‌ಬುಲ್ ನಾಯಿಯಿಂದ ಬಾಲಕನಿಗೆ ಕಚ್ಚಿಸಿದ್ದಾನೆ. ಅಲ್ಲದೆ ಈ ವೇಳೆ ಆ ಬಾಲಕ ಅಳುತ್ತಿದ್ದರೆ ಈ ಮಾಲೀಕ ನಗುತ್ತಾ ವಿಕೃತ ಖುಷಿ ಪಟ್ಟಿದ್ದಾನೆ.

ಮಹಾರಾಷ್ಟ್ರ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪಿಟ್‌ಬುಲ್ ಶ್ವಾನದ ಮಾಲೀಕನ ವಿರುದ್ಧ ಈಗ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ.

ವಿಡಿಯೋದಲ್ಲಿ ಏನಿದೆ?

ಆಟೋದಲ್ಲಿ ಈ ಪಿಟ್ಬುಲ್ ನಾಯಿ ಅದರ ಮಾಲೀಕ ಹಾಗೂ ಪಕ್ಕದಲ್ಲಿ ಬಾಲಕ ಕುಳಿತಿದ್ದಾನೆ. ನಾಯಿ ಮಾಲೀಕ ಉದ್ದೇಶಪೂರ್ವಕವಾಗಿ ಬಾಲಕನತ್ತ ನಾಯಿಯನ್ನು ರೊಚ್ಚಿಗೆಬ್ಬಿಸಿದ್ದು ಬಾಲಕನ ಮೇಲೆ ಆಟೋದಲ್ಲಿಯೇ ನಾಯಿ ದಾಳಿ ಮಾಡಿದೆ. ಈ ವೇಳೆ ಮಾಲೀಕ ನಾಯಿಯಿಂದ ಬಾಲಕನನ್ನು ರಕ್ಷಿಸುವುದು ಬಿಟ್ಟು ವಿಕೃತವಾಗಿ ನಕ್ಕಿದ್ದಾನೆ. ಅಲ್ಲದೇ ಆರಂಭದಲ್ಲಿ ಆತ ನಾಯಿಯನ್ನು ರಕ್ಷಿಸುವ ಪ್ರಯತ್ನವನ್ನು ಮಾಡಿಲ್ಲ.

ಆದರೆ ನಂತರದಲ್ಲಿ ಬಾಲಕ ಜೋರಾಗಿ ಕಿರುಚಲು ಶುರು ಮಾಡಿದ್ದು, ಇತ್ತ ನಾಯಿ ಬಾಲಕನನ್ನು ಕಚ್ಚಲು ಆತನ ಗಲ್ಲದ ಮೇಲೆ ಹಾರಿದೆ. ಬಾಲಕನ ಬಟ್ಟೆಯನ್ನು ನಾಯಿ ಕಚ್ಚಿ ಹಿಡಿದುಕೊಂಡಿದ್ದು, ಆದರೂ ಬಾಲಕ ಶ್ವಾನದ ಹಿಡಿತದಿಂದ ಬಿಡಿಸಿಕೊಂಡು ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ. ಮುಂಬೈನ ಮನ್ಖುರ್ದ್ ಪ್ರದೇಶದಲ್ಲಿ ಗುರುವಾರ ಘಟನೆ ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದೀಗ ಬಾಲಕನ ತಂದೆ ನೀಡಿದ ದೂರಿನ ಪ್ರಕಾರ, ವಸತಿ ಬಡಾವಣೆಯಲ್ಲಿ ನಿಲ್ಲಿಸಿದ್ದ ರಿಕ್ಷಾದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಆರೋಪಿ ಸುಹೈಲ್ ಹಸನ್ ಖಾನ್ (43) ಎಂಬಾತ ನಾಯಿಯನ್ನು ಛೂಬಿಟ್ಟ ಎನ್ನಲಾಗಿದೆ. ಬಾಲಕನ ಗಲ್ಲಕ್ಕೆ ನಾಯಿ ಕಚ್ಚಿದ್ದು, ತೀವ್ರವಾಗಿ ಗಾಯಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Belagavi: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಯುವ ರೈತ ಆತ್ಮಹತ್ಯೆ!

You may also like