Home » Operation Sindoor: “ಆಪರೇಷನ್ ಸಿಂಧೂರ” ಕ್ಕೆ ಸಹಾಯ ಮಾಡಿದ 10ರ ಬಾಲಕನ ಶಿಕ್ಷಣ ವೆಚ್ಚ ಭರಿಸಲು ಮುಂದಾದ ಸೇನೆ!

Operation Sindoor: “ಆಪರೇಷನ್ ಸಿಂಧೂರ” ಕ್ಕೆ ಸಹಾಯ ಮಾಡಿದ 10ರ ಬಾಲಕನ ಶಿಕ್ಷಣ ವೆಚ್ಚ ಭರಿಸಲು ಮುಂದಾದ ಸೇನೆ!

0 comments

Operation Sindoor: ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ʻಆಪರೇಷನ್‌ ಸಿಂಧೂರʼ (Operation Sindoor) ಪ್ರತೀಕಾರದ ಕಾರ್ಯಾಚರಣೆ ಸಮಯದಲ್ಲಿ ಉದ್ವಿಗ್ನತೆಯ ಭೀತಿ ಲೆಕ್ಕಿಸದೇ ಯೋಧರಿಗೆ ಸಹಾಯ ಮಾಡಿದ್ದ 10 ವರ್ಷದ ಬಾಲಕನ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸಲು ಸೇನೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಸೇನೆಯ ಗೋಲ್ಡನ್ ಆರೋ ವಿಭಾಗವು ಶವನ್‌ ಸಿಂಗ್‌ನ ತ್ಯಾಗ, ಉತ್ಸಾಹವನ್ನ ಮೆಚ್ಚಿಕೊಂಡಿದೆ. ಹೀಗಾಗಿ ಬಾಲಕನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನ ತೆಗೆದುಕೊಳ್ಳಲು ನಿರ್ಧರಿಸಿದೆ.

ಭಾರತ ಪಾಕ್‌ ಗಡಿ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಏರ್ಪಟ್ಟಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಫಿರೋಜ್‌ಪುರದ ಮಾಮ್‌ಡೋಟ್ ಪ್ರದೇಶದ ತಾರಾ ವಾಲಿ ಗ್ರಾಮ ಶವಣ್‌ ಸಿಂಗ್‌ ಸೈನಿಕರಿಗೆ ನೀರು, ಐಸ್, ಚಹಾ, ಹಾಲು ಮತ್ತು ಲಸ್ಸಿಯನ್ನ ಖುದ್ದಾಗಿ ತಲುಪಿಸುತ್ತಿದ್ದ. ಗುಂಡು, ಶೆಲ್‌ಗಳ ಶಬ್ಧ, ಉದ್ವಿಗ್ನತೆಗೂ ಜಗ್ಗದೇ ನಿರ್ಭೀತಿಯಿಂಧ ಸೈನಿಕರ ಸೇವೆ ಮಾಡಿದ್ದ. 4ನೇ ತರಗತಿ ಓದುತ್ತಿರುವ ಶವನ್‌ನ ಈ ಸೇವೆ ಯೋಧರ ಹೃದಯ ಗೆದ್ದಿದೆ.

ಈತನ ಸೇವೆಯನ್ನ ಭಾರತೀಯ ಸೇನೆ ಶ್ಲಾಘಿಸಿದೆ. ಆದ್ದರಿಂದ ಶವನ್‌ ಸಿಂಗ್‌ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನ ಸೇನೆಯೇ ನೋಡಿಕೊಳ್ಳುವುದಾಗಿ ಘೋಷಿಸಿದೆ.

ಸೈನಿಕನಾಗುವ ಕನಸು

ಇನ್ನೂ ಈ ಕುರಿತು ಮಾತನಾಡಿರುವ ಶವನ್‌ ಸಿಂಗ್‌, ಯೋಧನಾಗುವ ಕನಸು ಕಂಡಿರುವುದಾಗಿ ಹೇಳಿಕೊಂಡಿದ್ದಾನೆ. ಯೋಧನಾಗಿ ಮುಂದೆ ದೇಶಸೇವೆ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Indonesia: 280 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ ಅವಘಡ! ಹಲವರು ನಾಪತ್ತೆ

You may also like