Home » Mangaluru: ಮಂಗಳೂರು: ನಿಯಂತ್ರಣ ತಪ್ಪಿ ತೋಡಿಗೆ ಉರುಳಿದ ಬಸ್ : ಓರ್ವ ಸಾವು, 18 ಮಂದಿಗೆ ಗಾಯ

Mangaluru: ಮಂಗಳೂರು: ನಿಯಂತ್ರಣ ತಪ್ಪಿ ತೋಡಿಗೆ ಉರುಳಿದ ಬಸ್ : ಓರ್ವ ಸಾವು, 18 ಮಂದಿಗೆ ಗಾಯ

0 comments

Mangaluru: ಇಂದು ಮುಂಜಾನೆ ಬೆಳಗಾವಿಯಿಂದ ಮಂಗಳೂರಿಗೆ (Mangaluru) ಬರುತ್ತಿದ್ದ ಖಾಸಗಿ ಸ್ವೀಪ‌ರ್ ಕೋಚ್ ಬಸ್ ಅಂಕೋಲಾ ಸಮೀಪ ತೋಡಿಗೆ ಉರುಳಿ ಬಿದ್ದು, ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐದು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಅಂಕೋಲಾ ಸಮೀಪ ಅಗಸೂರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿ ಹರಿಯುತ್ತಿರುವ ತೋಡಿಗೆ ಪಲ್ಟಿಯಾಗಿದೆ. ಈ ವೇಳೆ ಪ್ರಯಾಣಿಕರೆಲ್ಲ ಮುಂಜಾನೆಯ ಸುಖನಿದ್ರೆಯಲ್ಲಿದ್ದರು. ಕೂಡಲೇ ಸ್ಥಳೀಯರು ಧಾವಿಸಿ ಬಂದು ರಕ್ಷಣಾ ಕಾರ್ಯ ಮಾಡಿದ್ದು, ಬಸ್‌ ಮೇಲಕ್ಕೆತ್ತುವಾಗ ಒಂದು ಮೃತದೇಹ ಕಂಡುಬಂದಿದೆ.

ಇದನ್ನೂ ಓದಿ: Gold Rate Today: ಇಂದು ಚಿನ್ನ ಅಗ್ಗವಾಗಿದೆಯೇ ಅಥವಾ ದುಬಾರಿಯಾಗಿದೆಯೇ? ಜುಲೈ 21, 2025 ರಂದು ನಿಮ್ಮ ನಗರದ ಚಿನ್ನದ ಇತ್ತೀಚಿನ ಬೆಲೆ ಇಲ್ಲಿದೆ

You may also like