Chandraprabha: ‘ಗಿಚ್ಚಿ ಗಿಲಿ ಗಿಲಿ’ ಕಾಮಿಡಿ ಶೋ ಮೂಲಕ ಸದ್ದು ಮಾಡಿದ್ದ ಹಾಸ್ಯ ನಟ ಚಂದ್ರಪ್ರಭ. ಇವರ ಕಾಮಿಡಿ ಡೈಲಾಗ್‌ಗಳನ್ನು ಇಷ್ಟ ಪಟ್ಟವರೂ ಇದ್ದಾರೆ. ಅದೇ ಮತ್ತೆ ಕೆಲವರು ಟೀಕೆ ಮಾಡಿದ್ದಾರೆ. ಆದರೆ, ಯಾವುದೇ ಕಾಮಿಡಿ ಶೋನಲ್ಲಿ ಚಂದ್ರಪ್ರಭ ಇದ್ದರೆ ಅಲ್ಲಿ ನಗುವಿಗೇನು ಕೊರತೆ ಇಲ್ಲ ಎಂಬುದು ಅನೇಕ ಅಭಿಮಾನಿಗಳ ಅಭಿಪ್ರಾಯ. ಆದರೆ ಈಗ ಆಶ್ಚರ್ಯದ ಸಂಗತಿ ಎಂದರೆ ಈ ಚಂದ್ರಪ್ರಭ ಅವರು ಗಾರೆ ಕೆಲಸ ಮಾಡುತ್ತಿರುವ ವಿಚಾರ!!
ಚಂದ್ರಪ್ರಭ ಅವರು ರಿಯಾಲಿಟಿ ಶೋಗಳಿಗೆ ಬರುವ ಮುನ್ನ ಗಾರೆ ಕೆಲಸವನ್ನೇ ನಂಬಿಕೊಂಡಿದ್ದರು. ಇಲ್ಲಿ ಅವರ ಪ್ರತಿಭೆಗೆ ಆರಂಭದಲ್ಲಿ ಒಳ್ಳೆಯ ವೇದಿಕೆ ಸಿಕ್ಕರೂ, ದಿನ ಕಳೆದಂತೆ ಅವಕಾಶಗಳು ಅರಸಿ ಬರುತ್ತಿಲ್ಲ. ಈ ಕಾರಣಕ್ಕೆ ತನಗೆ ಅನ್ನ ಹಾಕುತ್ತಿದ್ದ ಹಳೆಯ ಕಸುಬಿಗೆ ಮತ್ತೆ ಮರಳಿದ್ದಾರೆ. ಇಲ್ಲಿ ಸೆಲೆಬ್ರಿಟಿಯಾಗಿ ಮಿಂಚಿದ್ದ ಚಂದ್ರಪ್ರಭ ಅವರು ಅಲ್ಲಿ ಸಾಮಾನ್ಯ ಕೆಲಸಗಾರರಂತೆ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ.
ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಇನ್ ಸ್ಟಾಗ್ರಾಂನಲ್ಲೂ ಗಾರೆ ಕೆಲಸ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾಗಿದೆ, ಸಂಸಾರವಿದೆ. ಹಾಗಂತ ಯಾರೂ ಮುಜುಗರಪಡುವಂತಹ ಕೆಲಸ ಮಾಡ್ತಿಲ್ಲ. ಮೊದಲೂ ನಾನು ಗಾರೆ ಕೆಲಸ ಮಾಡುತ್ತಿದ್ದೆ. ಈಗ ಮತ್ತೆ ಮಾಡುತ್ತಿದ್ದೇನೆ. ಸಂಪಾದನೆಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಅಷ್ಟೇ ಎನ್ನುವುದು ಅವರ ಪಾಲಿಸಿ.
ಚಂದ್ರಪ್ರಭಾ, ಇಟ್ಟಿಗೆಗಳನ್ನು ಹೊರುತ್ತಾ, ಸಿಮೆಂಟ್ ಕಲೆಸುತ್ತಾ, ಪ್ಲಾಸ್ಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯಾವುದೇ ಬೇಸರವಿಲ್ಲದೆ ನಗು ನಗುತ್ತಲೇ ಗಾರೆ ಕೆಲಸ ಮಾಡುತ್ತಿದ್ದಾರೆ. ‘ನಾನು ಮೊದಲು ಗಾರೆ ಕೆಲಸ ಮಾಡುತ್ತಿದ್ದೆ. ಆ ನಂತರ ಸಿನಿಮಾಗಳಿಗೆ ಬಂದಿದ್ದು, ಈಗ ಮತ್ತೆ ಗಾರೆ ಕೆಲಸ ಮಾಡುತ್ತಿದ್ದೇನೆ. ಗಾರೆ ಕೆಲಸ ಮಾಡಿ 17 ವರ್ಷಗಳಾಗಿತ್ತು. ಈಗ ಮತ್ತೆ ಎರಡು ತಿಂಗಳಿನಿಂದ ಗಾರೆ ಕೆಲಸ ಮಾಡ್ತಿದ್ದೇನೆ. ಇಲ್ಲಿವರೆಗೆ ಯಾವುದೇ ಸೀರಿಯಲ್ ಅಥವಾ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ. 10 ವರ್ಷಗಳಲ್ಲಿ ಸುಮಾರು 80 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈ ವರ್ಷ ಒಂದೂ ಸಿನಿಮಾ, ಸೀರಿಯಲ್ ಅವಕಾಶ ಸಿಗಲಿಲ್ಲ’ ಎಂದು ನಟ ಚಂದ್ರಪ್ರಭ ಹೇಳಿದ್ದಾರೆ.
https://www.instagram.com/reel/DMK83rqvFDR/?igsh=MXE0NXc1NTVqaTJ1dg==
ಇದನ್ನೂ ಓದಿ: D K Shivkumar: ಧರ್ಮಸ್ಥಳ ಪ್ರಕರಣ – ದಿಢೀರ್ SIT ರಚನೆ ಯಾಕೆ? ಡಿಕೆಶಿ ಹೇಳಿದ್ದೇನು..?
