Poison Food: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳ ಸಮೀಪದ ಕೆ. ತಿಮ್ಮಾಪುರ ಗ್ರಾಮದಲ್ಲಿ ವಿಷಾಹಾರ ಸೇವಿಸಿ ತಂದೆ ರಮೇಶ್(38) ಮಗಳು ನಾಗಮ್ಮ(8), ಮತ್ತೊಬ್ಬ ಬಾಲಕಿ ದೀಪಾ(6) ಮೃತ ಪಟ್ಟಿದ್ದಾರೆ. ತಾಯಿ ಪದ್ಮಾ, ಮಗ ಕೃಷ್ಣ, ಚೈತ್ರಾ, ದೀಪಾ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ. ಇದರಲ್ಲಿ , ದೀಪಾ ಲಿಂಗಸುಗೂರು ಆಸ್ಪತ್ರಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಇದೀಗ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ ಆರು ಜನರ ಕುಟುಂಬ ಊಟ ಮಾಡಿ ಮಲಗಿದ್ದರು. ರಾತ್ರಿ ಹೊಟ್ಟೆ ನೋವಿನಿಂದ ನರಳಾಡಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಲಿಂಗಸೂಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಅದಾಗಲೇ ಮೃತರಾಗಿದ್ದರೆ. ಓರ್ವ ಬಾಲಕಿ ಈಗ ಸಾವನ್ನಪ್ಪಿದ್ದಾಳೆ.
ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾಕೆ ಹೀಗಾಯಿತು ಅನ್ನುವ ಬಗ್ಗೆ ಇನ್ನು ತನಿಖೆ ಕೈಗೊಳ್ಳಬಾಕಾಗಿದೆ. ಬದುಕಿರುವವರು ಈ ಘಟನೆ ಹೇಗೆ ನಡೆಯಿತು, ಏನು ಆಹಾರ ತಿಂದ್ರು ಅನ್ನುವ ಬಗ್ಗೆ ಮಾಹಿತಿಯನ್ನು ಇನ್ನಷ್ಟೆ ನೀಡಬೇಕಾಗಿದೆ.
ಇದನ್ನೂ ಓದಿ: Kapil sibal: ದರ್ಶನ್ ಕೇಸ್‌ನಿಂದ ಹಿಂದೆ ಸರಿದ ಹಿರಿಯ ವಕೀಲ ಕಪಿಲ್ ಸಿಬಲ್
