Home » Kapil sibal: ದರ್ಶನ್‌ ಕೇಸ್‌ನಿಂದ ಹಿಂದೆ ಸರಿದ ಹಿರಿಯ ವಕೀಲ ಕಪಿಲ್ ಸಿಬಲ್

Kapil sibal: ದರ್ಶನ್‌ ಕೇಸ್‌ನಿಂದ ಹಿಂದೆ ಸರಿದ ಹಿರಿಯ ವಕೀಲ ಕಪಿಲ್ ಸಿಬಲ್

0 comments

Kapil sibal: ದರ್ಶನ್‌ ಕೇಸ್‌ನಿಂದ ಹಿರಿಯ ವಕೀಲ ಕಪಿಲ್ ಸಿಬಲ್ ಹಿಂದೆ ಸರಿದಿದ್ದಾರೆ. ಇಂದು (ಜು.22) ಸುಪ್ರೀಂ ಕೋರ್ಟ್‌ಗೆ ದರ್ಶನ್‌ ಪರ ವಾದ ಮಂಡಿಸಲು ಅವರು ಹಾಜರಾಗಬೇಕಿತ್ತು ಆದರೆ ಗೈರಾಗಿದ್ದಾರೆ.ದರ್ಶನ್ ಪರ ವಕೀಲ ಸಿದ್ಧಾರ್ಥ ದವೆ ಹಾಜರಾಗಿದ್ದರು. ಕಪಿಲ್ ಸಿಬಲ್‌ ಅವರು ಗೈರಾಗಿದ್ದರಿಂದ, ಕೇಸ್‌ ಬಗ್ಗೆ ಅಧ್ಯಯನ ಮಾಡಲು ಸ್ವಲ್ಪ ಕಾಲವಕಾಶವನ್ನು ಸಿದ್ಧಾರ್ಥ ದವೆ ಕೇಳಿದರು. ಕೆಲಕಾಲವಷ್ಟೇ ವಾದ ಮಂಡನೆಗೆ ನ್ಯಾಯಾಲಯ ಅವಕಾಶ ನೀಡಿತು. ಅಲ್ಲದೇ ಲಿಖಿತ ರೂಪದಲ್ಲಿ ವಾದ ಮಂಡಿಸಲು ಸೂಚನೆ ನೀಡಿ ಗುರುವಾರಕ್ಕೆ ವಿಚಾರಣೆ ಮುಂದೂಡಲಾಯಿತು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ (Darshan), ಪವಿತ್ರಾಗೌಡ ಸೇರಿ ಇತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ನಿಗದಿಪಡಿಸಲಾಗಿತ್ತು. ಬಹತೇಕ ಇಂದು ತೀರ್ಪು ಬರಬಹುದು ಎಂಬ ಚರ್ಚೆ ನಡೆಯುತ್ತಿತ್ತು. ಆದರೆ ದರ್ಶನ್‌ ಪರ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೇಳಿದ್ದರಿಂದ ವಿಚಾರಣೆ ಮುಂದೂಡಲಾಯಿತು.

ಇದನ್ನೂ ಓದಿ: Nimisha priya: ಕೊನೆಗೂ ನಿಮಿಷಾ ಪ್ರಿಯಾ ಮರಣದಂಡನೆ ರದ್ದುಗೊಳಿಸಿದ ಯೆಮೆನ್!

You may also like