Home » Paypal: ಇನ್ಮುಂದೆ ‘ಪೇಪಾಲ್’ ಮೂಲಕ ಯುಪಿಐ ಬಳಸಿ ವಿದೇಶಗಳಲ್ಲಿ ಶಾಪಿಂಗ್!

Paypal: ಇನ್ಮುಂದೆ ‘ಪೇಪಾಲ್’ ಮೂಲಕ ಯುಪಿಐ ಬಳಸಿ ವಿದೇಶಗಳಲ್ಲಿ ಶಾಪಿಂಗ್!

0 comments

Paypal: ಭಾರತೀಯ ಬಳಕೆದಾರರು ಪೇಪಾಲ್ (Paypal) ಮೂಲಕ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್‌ (ಯುಪಿಐ) ಬಳಸಿಕೊಂಡು ವಿದೇಶಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವಂತಹ ವ್ಯವಸ್ಥೆ ಜಾರಿಗೆ ಬರಲಿದೆ.

ಜಾಗತಿಕ ಪಾವತಿ ಕಂಪನಿಯಾದ ಪೇಪಾಲ್ ತನ್ನ ಹೊಸ ವೇದಿಕೆ ಪೇಪಾಲ್ ವರ್ಲ್ಡ್ ಪ್ರಾರಂಭಿಸಿದ್ದು, ವಿಶ್ವದ ಅತಿದೊಡ್ಡ ಪೇಮೆಂಟ್ ವ್ಯವಸ್ಥೆಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಪರಸ್ಪರ ಸಂಪರ್ಕ ಗುರಿ ಹೊಂದಿದೆ. ಇದರಲ್ಲಿ ಯುಪಿಐ ಕೂಡ ಸೇರಿದೆ. ಭಾರತೀಯ ಗ್ರಾಹಕರು ಈಗ ಅಂತಾರಾಷ್ಟ್ರೀಯ ವ್ಯಾಪಾರಿಗಳಿಂದ ಶಾಪಿಂಗ್ ಮಾಡಲು ಯುಪಿಐ ಬಳಸಬಹುದು.

ಉದಾಹರಣೆಗೆ, ಅಮೆರಿಕದ ಆನ್‌ಲೈನ್ ಸ್ಟೋರ್ ನಲ್ಲಿ ವಸ್ತುಗಳನ್ನು ಖರೀದಿಸಲು ಬಯಸುವ ಭಾರತೀಯ ಬಳಕೆದಾರರು ಚೆಕ್‌ಔಟ್‌ನಲ್ಲಿ ಪೇಪಾಲ್‌ ಆಯ್ಕೆ ಕ್ಲಿಕ್ ಮಾಡಿದ ನಂತರ ಯುಪಿಐ ಬಟನ್ ಕಾಣಿಸುತ್ತದೆ. ಅದರ ಮೂಲಕ ದೇಶೀಯ ಪಾವತಿಗಳಂತೆಯೇ ಹಣ ಪಾವತಿಸಬಹುದು ಎಂದು ಪೇಪಾಲ್ ವ್ಯವಸ್ಥಾಪಕ ನಿರ್ದೇಶಕ ರಿತೇಶ್ ಶುಕ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: Renukaswamy Murder Case: ಹೈಕೋರ್ಟ್ ಮಾಡಿದ ಅದೇ ತಪ್ಪನ್ನು ನಾವು ಮಾಡುವುದಿಲ್ಲ- ಸುಪ್ರೀಂ ಕೋರ್ಟ್‌

You may also like