Home » Independence Day: ಸ್ವಾತಂತ್ರೋತ್ಸವದಲ್ಲಿ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳಲಿರುವ ಯುವಕ ಯಶಸ್ ರೈ – ಶಾಸಕರಿಂದ ಸನ್ಮಾನ

Independence Day: ಸ್ವಾತಂತ್ರೋತ್ಸವದಲ್ಲಿ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳಲಿರುವ ಯುವಕ ಯಶಸ್ ರೈ – ಶಾಸಕರಿಂದ ಸನ್ಮಾನ

0 comments

Independence Day: ಆಗಸ್ಟ್ 15ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ಉತ್ಸವದಲ್ಲಿ ವಿಶೇಷ ಯುವ ರಾಯಭಾರಿಯಾಗಿ ಪ್ರಧಾನ ಮಂತ್ರಿ ಸೇರಿದಂತೆ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಪಡೆದ ಕೊಡಗು ಜಿಲ್ಲೆಯ ಪ್ರತಿಭಾನ್ವಿತ ಯುವಕ ಯಶಸ್ ರೈರವರನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಸುದರ್ಶನ ಅತಿಥಿಗೃಹದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ಲವ ಕುಮಾರ್ ಹಾಗೂ ಜಯಂತಿ ದಂಪತಿಯರ ಪುತ್ರರಾದ ಯಶಸ್ ರೈ ಸುಳ್ಯ ಕೆವಿಜಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ. ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಡಾ ಮಂತರ್ ಗೌಡ ಶ್ಲಾಘಿಸಿದ್ದಾರೆ.

ಯಶಸ್ ರವರನ್ನು ಸನ್ಮಾನಿಸಿದ ಸಂಧರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ.ಸುಕುಮಾರ್, ಯಶಸ್ ರವರ ತಾಯಿ ಬಿ.ಬಿ.ಜಯಂತಿ ಉಪಸ್ಥಿತರಿದ್ದರು.

ಇದನ್ನೂ ಓದಿ: Mobile Export: ಭಾರತ ವಿಶ್ವದ ಮೂರನೇ ಅತಿದೊಡ್ಡ ಫೋನ್ ರಫ್ತುದಾರ ರಾಷ್ಟ್ರ – ಬರೋಬ್ಬರಿ $20.5 ಬಿಲಿಯನ್ ಮೌಲ್ಯದ ಮೊಬೈಲ್ ಫೋನ್‌ಗಳ ರಫ್ತು

You may also like