Home » Shivamogga: ʼಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರʼ ಹನುಮಂತ ದೇವರ ಕಾರ್ಣಿಕ

Shivamogga: ʼಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರʼ ಹನುಮಂತ ದೇವರ ಕಾರ್ಣಿಕ

0 comments

Shivamogga: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ಗುಡ್ಡದ ಎತ್ತರದ ಕಂಬವೇರಿ ಕಾರ್ಣಿಕವನ್ನು ನುಡಿದಿದ್ದಾರೆ.

ಗಣಮಗ ಪಿಳ್ಳೆಮಟ್ಟಿಯವರ ಭವಿಷ್ಯವಾಣಿ ಏನಂದರೆ, “ಶಿವನ ತುರುಬಿಗೆ ಪಂಜರದ ಗಿಳಿ ಹಾರೀತು” ಎಂದು ನುಡಿದಿದ್ದಾರೆ. ಈ ವರ್ಷ ರೈತಾಪಿ ವರ್ಗಕ್ಕೆ ಅತಿವೃಷ್ಟಿಯಿಂದ ತೊಂದರೆಯಾಗಲಿದೆ ಎಂದು ವರದಿಯಾಗಿದೆ.

ಈ ಬಾರಿ ಮುಂಗಾರಿಗಿಂತ ಹಿಂಗಾರು ಮಳೆ ಜೋರಾಗಿರಲಿದೆ, ಕೃಷಿ ಚಟುವಟಿಕೆಗಳಿಗೆ ಸವಾಲು ಎದುರಾಗಲಿದೆ ಎಂದು ತಿಳಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತಲ್ಲಣ ಮತ್ತು ಕುರ್ಚಿಗಾಗಿ ಕಿತ್ತಾಟ ತೀವ್ರಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Operation Sindhoor: ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿದೆ, ಕೊನೆಗೊಂಡಿಲ್ಲ – ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್

You may also like