Home » Dharmasthala Case: ರಾತ್ರಿ ʼಮಾಸ್ಕ್‌ಮ್ಯಾನ್‌ʼ ನ ವಿಚಾರಣೆ: ಸ್ಫೋಟಕ ವಿಷಯ ಬಿಚ್ಚಿಟ್ಟ ದೂರುದಾರ

Dharmasthala Case: ರಾತ್ರಿ ʼಮಾಸ್ಕ್‌ಮ್ಯಾನ್‌ʼ ನ ವಿಚಾರಣೆ: ಸ್ಫೋಟಕ ವಿಷಯ ಬಿಚ್ಚಿಟ್ಟ ದೂರುದಾರ

0 comments

Dharmasthala Case: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪ ಮಾಡಿರುವ ಮಾಸ್ಕ್‌ಮ್ಯಾನ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.

ಡಿಜಿಪಿ ಪ್ರಣವ್‌ ಮೊಹಂತಿ, ಡಿಐಜಿ ಎಂ.ಎನ್‌.ಅನುಚೇತ್‌, ಎಸ್‌.ಪಿ ಜಿತೇಂದ್ರ ಕುಮಾರ್‌ ದಯಾಮಾ ಸೇರಿ ಕೆಲವು ಉನ್ನು ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಈ ಪ್ರಕರಣದ ಮುಂದುವರಿದ ಭಾಗವಾಗಿ ರಾತ್ರಿ ಸಭೆ ಮಾಡಿ ಅನೇಕ ವಿಚಾರಗಳ ಚರ್ಚೆ ನಡೆದಿದೆ. ನಿನ್ನೆ ರಾತ್ರಿ ಎಸ್‌ಐಟಿ ತಂಡ ಪುತ್ತೂರಿನ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್‌ ಜೊತೆ ಸಭೆ ಮಾಡಿದ್ದು, ಮೂರು ದಿನಗಳ ತನಿಖೆ, ಮಾರ್ಕಿಂಗ್‌, ವಿಚಾರಣೆ, ಉತ್ಖನನ ಕುರಿತು ಚರ್ಚೆ ಮಾಡಿರುವ ಕುರಿತು ವರದಿಯಾಗಿದೆ.

ನಿನ್ನೆ ದೂರುದಾರನ ಕೂಡಾ ವಿಚಾರಣೆ ನಡೆಸಲಾಗಿದ್ದು, ಈತ ಸ್ಫೋಟಕ ಮಾಹಿತಿಗಳನ್ನು ಹೇಳಿದ್ದಾನೆ ಎಂದು ವರದಿಯಾಗಿದೆ. ದೂರುದಾರ ತಾನು ಗುರುತಿಸಿದ ಸ್ಥಳಗಳಲ್ಲಿಯೇ ಶವಗಳನ್ನು ಹೂತಿಟ್ಟಿದ್ದೇನೆ ಎಂದು ವಾದ ಮಾಡಿರುವುದಾಗಿ ವರದಿಯಾಗಿದೆ. “9 ರಿಂದ 13 ಸ್ಥಳಗಳಲ್ಲಿ ಶವಗಳು ಸಿಗಬಹುದು. ಅಲ್ಲಿ ಉತ್ಖನನ ನಡೆಸಿ” ಎಂದು ಹೇಳಿದ್ದಾನೆ. ಅಲ್ಲದೇ ಕೆಲವು ಸ್ಥಳಗಳಲ್ಲಿ ಮಳೆ, ಪ್ರವಾಹದಿಂದ ಮಣ್ಣು ಸೇರಿರುವುದರಿಂದ ಶವಗಳು ಆಳದಲ್ಲಿ ಸಿಕ್ಕಿರಬಹುದು ಎಂದು ಹೇಳಿರುವುದಾಗಿ ವರದಿಯಾಗಿದೆ.

ಗುರುತು ಮಾಡಲಾಗಿರುವ 13 ಸ್ಥಳಗಳಲ್ಲಿ ಯಾವುದೇ ಕಳೇಬರ, ಅವಶೇಷಗಳು ಸಿಗದೇ ಹೋದರೆ ಇನ್ನಷ್ಟು ಸ್ಥಳಗಳನ್ನು ಗುರುತಿಸುವುದಾಗಿ ಹೇಳಿದ್ದಾನೆ. ದೂರುದಾರನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ಫಾರೆನ್ಸಿಕ್‌ ವಿಶ್ಲೇಷಣೆಗೆ ಒತ್ತು ನೀಢಳಾಗುವುದು ಎಂದು ವರದಿಯಾಗಿದೆ. ಈ ಪ್ರಕರಣದ ಸೂಕ್ಷ್ಮತೆಗೆ ತಕ್ಕಂತೆ, ತನಿಖೆಯನ್ನು ಪಾರದರ್ಶಕವಾಗಿ ಮತ್ತು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Shivamogga: ʼಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರʼ ಹನುಮಂತ ದೇವರ ಕಾರ್ಣಿಕ

You may also like