Home » Ramya: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಗಳಿಂದ ನಿಂದನೆ ಪ್ರಕರಣ – ಮತ್ತೆ ಇಬ್ಬರು ಆರೋಪಿಗಳ ಬಂಧನ

Ramya: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಗಳಿಂದ ನಿಂದನೆ ಪ್ರಕರಣ – ಮತ್ತೆ ಇಬ್ಬರು ಆರೋಪಿಗಳ ಬಂಧನ

0 comments

Ramya: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರಿಗೆ ನಟ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ ಗಳಿಂದ ನಿಂದನೆ ಪ್ರಕರಣ ಸಂಬಂಧ ಇದೀಗ ಮತ್ತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಬಂಧನ ಮಾಡಿದ್ದಾರೆ. ಪೊಲೀಸರು ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ನಿಂದನೆ ಮಾಡಿದ್ದಲ್ಲದೆ, ಅಶ್ಲೀಲವಾಗಿ ಕಾಮೆಂಟ್ ಮಾಡಿ ಕಿಡಿಗೇಡಿಗಳು ರಮ್ಯಾ ಅವರನ್ನು ನಿಂದಿಸಿದ್ದರು. ಈ ಪ್ರಕರಣ ಸಂಬಂಧ ಒಟ್ಟು ಈವರೆಗೆ ನಾಲ್ವರನ್ನ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ರಮ್ಯ ಅವರ ದೂರಿನ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗವು ಇಬ್ಬರು ವ್ಯಕ್ತಿಗಳನ್ನು ಕಳೆದ ಶನಿವಾರ ಬಂಧಿಸಲಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ತಿಳಿಸಿದ್ದರು. ಅಂದು ಮಾತನಾಡಿದ ಸಿಂಗ್, “ಆನ್‌ಲೈನ್‌ನಲ್ಲಿ ನಿಂದನೀಯ ಕಾಮೆಂಟ್” ಪೋಸ್ಟ್ ಮಾಡುವಲ್ಲಿ ನೇರವಾಗಿ ಭಾಗಿಯಾದ 11 ಮಂದಿಯನ್ನು ಗುರುತಿಸಲಾಗಿದೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಮತ್ತೆ ಇದೀಗ ಇಬ್ಬರನ್ನು ಬಂಧಿಸಲಾಗಿದೆ. ಇನ್ನುಳಿದ ಕಿಡಿಗೇಡಿಗಳಿಗಾಗಿ ಪತ್ತೆಕಾರ್ಯ ಮುಂದುವರೆದಿದೆ.

ಪ್ರಕರಣದ ತನಿಖೆ ಆರಂಭವಾಗ್ತಿದ್ದಂತೆ, ಅಶ್ಲೀಲ ಪದ ಬಳಸಿ ಕಾಮೆಂಟ್ ಮಾಡಿದ ಕೋಲಾರ ಹಾಗು ಚಿತ್ರದುರ್ಗ ಮೂಲದ ಇಬ್ಬರನ್ನು ಸಿಸಿಬಿ ಬಂಧನ ಮಾಡಿ ಡ್ರೀಲ್ ಮಾಡಿತ್ತು. ಸೋಷಿಯಲ್ ಮೀಡಿಯಾ ಐಡಿಗಳ ಮೂಲಕ ಈ ನಾಲ್ವರನ್ನು ಪತ್ತೆ ಮಾಡಲಾಗಿದ್ದು, ಐಡಿಗಳನ್ನ ಪರಿಶೀಲನೆ ನಡೆಸಿ ಗುರುತು ವಿಳಾಸ ಪತ್ತೆ ಹಚ್ಚಲಾಗಿದೆ. ನಿನ್ನೆ ಮತ್ತಿಬ್ಬರನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ರಮ್ಯಾ, ಅಲಿಯಾಸ್ ದಿವ್ಯಾ ಸ್ಪಂದನಾ, ಜುಲೈ 28 ರಂದು ಆಯುಕ್ತರನ್ನು ಭೇಟಿಯಾಗಿ, ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಮತ್ತು “ಅತ್ಯಾಚಾರ ಮತ್ತು ಕೊಲೆ ಬೆದರಿಕೆ” ಕಳುಹಿಸಿದ್ದಕ್ಕಾಗಿ 43 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ದೂರು ದಾಖಲಿಸಿದ್ದರು.

ಇದನ್ನು ಓದಿ: Puttur: ಬಪ್ಪಳಿಗೆ-ಸಿಂಗಾಣಿ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ: ಶುಭಹಾರೈಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

You may also like