Roshni Walia: ಪೋಷಕರು ಅದರಲ್ಲೂ ತಾಯಿಯಾದವಳು ತನ್ನ ಮಕ್ಕಳಿಗೆ ಉತ್ತಮ ನಡೆ- ನುಡಿಗಳನ್ನು ಕಲಿಸುತ್ತಾಳೆ. ಮಕ್ಕಳು ತಪ್ಪು ದಾರಿಯಲ್ಲಿ ನಡೆದರೆ ತಿದ್ದಿ, ಬುದ್ದಿ ಹೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾಳೆ. ಆದರೆ ಇಲ್ಲೊಬ್ಬಳು ತಾಯಿಯೇ ತನ್ನ ಮಗಳಿಗೆ ನಿನಗೆ ಇಷ್ಟವಾದವರ ಜೊತೆ ಮಲಗು, ಎಂಜಾಯ್ ಮಾಡು, ಆದ್ರೆ ಪ್ರೊಟೆಕ್ಷನ್ ಯಾವಾಗಲೂ ಬಳಸು’ ಎಂದು ಸಲಹೆ ಕೊಟ್ಟಿದ್ದಾರೆ.
ಹೌದು, ನಟಿ ರೋಶ್ನಿ ವಾಲಿಯಾ (Roshni Walia) ಅವರು ಇತ್ತೀಚಿಗೆ ತಮ್ಮ ಸಂದರ್ಶನದಲ್ಲಿ ‘ನನ್ನ ತಾಯಿ, ನೀನು ಏನಾದರೂ ಮಾಡು, ಆದರೆ ಪ್ರೊಟೆಕ್ಷನ್ (ಕಾಂಡೋಮ್) ಬಳಸು, ಇಷ್ಟಪಟ್ಟವರ ಜೊತೆ ಮಲಗು ಎಂದು ನೇರವಾಗಿ ಹೇಳುತ್ತಾಳೆ. ಅಲ್ಲದೆ ಸಾಮಾನ್ಯವಾಗಿ ಪೋಷಕರು ಮನೆಯಿಂದ ಹೊರಗೆ ಹೋಗಬೇಡ ಎಂದು ಹೇಳುತ್ತಾರೆ. ಆದರೆ ನನ್ನ ತಾಯಿ ಹೊರಗೆ ಹೋಗು, ಪಾರ್ಟಿ ಮಾಡು, ಎಂಜಾಯ್ ಮಾಡು ಎಂದು ಹೇಳುತ್ತಾಳೆ’ ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ‘ನನ್ನ ಅಮ್ಮ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಪ್ರೊಟೆಕ್ಷನ್ ಮುಖ್ಯ ಎಂದು ಅವರು ಯಾವಾಗಲೂ ನನಗೆ ನೆನಪಿಸುತ್ತಾರೆ. ಅವರು ನನ್ನ ಸಹೋದರಿಗೂ ಅದೇ ವಿಷಯವನ್ನು ಹೇಳುತ್ತಿದ್ದರು. ಈಗ, ಅವರು ನನಗೆ ಹೇಳುತ್ತಿದ್ದಾರೆ’ ನಾನು ಇಂದು ಈ ಸ್ಥಿತಿಯಲ್ಲಿದ್ದೇನೆ ಎಂಬುದಕ್ಕೆ ಸಂಪೂರ್ಣ ಕೀರ್ತಿ ನನ್ನ ತಾಯಿಗೆ ಸಲ್ಲುತ್ತದೆ. ನನ್ನ ತಾಯಿ ತಮ್ಮ ಊರನ್ನು ತೊರೆದು ಮುಂಬೈಗೆ ಬಂದಿದ್ದು, ನನ್ನನ್ನು ಮತ್ತು ನನ್ನ ಕನಸುಗಳನ್ನು ಬೆಂಬಲಿಸಲು ಮಾತ್ರ. ಅವರ ತ್ಯಾಗವಿಲ್ಲದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ” ಎಂದೂ ನಟಿ ರೋಶ್ನಿ ಭಾವುಕರಾಗಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಸನ್ ಆಫ್ ಸರ್ದಾರ್-2 ಸಿನಿಮಾದಲ್ಲಿ ನಟಿ ರೋಶ್ನಿ ವಾಲಿಯಾ ನಟಿಸಿದ್ದು, ಈ ಹೇಳಿಕೆಯಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ.
ಇದನ್ನು ಓದಿ: PM Modi Bodyguard: ಪ್ರಧಾನಿ ಮೋದಿಗೆ ಮೊದಲ ಮಹಿಳಾ “ಬಾಡಿಗಾರ್ಡ್”- ಯಾರು ಈ ಖದರ್ ಲೇಡಿ !?
