Home » Murder: ಮಸೀದಿ ಎದುರಲ್ಲೇ ಹಿಂದೂ ಯುವಕನ ಭೀಕರ ಕೊಲೆ!

Murder: ಮಸೀದಿ ಎದುರಲ್ಲೇ ಹಿಂದೂ ಯುವಕನ ಭೀಕರ ಕೊಲೆ!

0 comments

Murder: ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದ ಎಂಬ ಕಾರಣ ಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ ಭಾನುವಾರ ರಾತ್ರಿ ಮಸೀದಿ ಎದುರಲ್ಲೇ ಆಗಿದೆ. ಸದ್ಯ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ಕೊಲೆ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬವನಿಂದ ಗವಿಸಿದ್ದಪ್ಪ ನಾಯಕ್ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

ಕೊಲೆ ಮಾಡಿ ಶರಣಾದ ಆರೋಪಿ

ಗವಿಸಿದ್ದಪ್ಪನನ್ನ ಕೊಲೆ ಮಾಡಿದ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್ಎಸ್ 2023 ಕಲಂ 3(2)ವಿ, ಎಸ್ಸಿ-ಎಸ್ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Accident: ಹಡಗು ಮುಳುಗಿ 68 ಮಂದಿ ಸಾವು, 74 ಮಂದಿ ಕಣ್ಮರೆ!!

You may also like