Home » Dharmasthala Burial Case: ಧರ್ಮಸ್ಥಳ ಪ್ರಕರಣ – ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಲ್ಲ – ಎಲ್ಲವೂ ಎಸ್ ಐ ಟಿ ವಿವೇಚನೆಗೆ ಬಿಡಲಾಗಿದೆ – ಗೃಹಸಚಿವ ಪರಮೇಶ್ವರ್

Dharmasthala Burial Case: ಧರ್ಮಸ್ಥಳ ಪ್ರಕರಣ – ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಲ್ಲ – ಎಲ್ಲವೂ ಎಸ್ ಐ ಟಿ ವಿವೇಚನೆಗೆ ಬಿಡಲಾಗಿದೆ – ಗೃಹಸಚಿವ ಪರಮೇಶ್ವರ್

0 comments

Dharmasthala Burial Case: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಕಳೆದ ಹತ್ತು ದಿನಗಳಿಂದ ಕಾರ್ಯಾಚರಣೆಯನ್ನು ಪ್ರಣವ್‌ ಮೊಹಂತಿ ಅವರ ನೇತೃತ್ವದ ಎಸ್‌ಐಟಿ ತಂಡದಿಂದ ನಡೆಯುತ್ತಿದೆ. ದೂರು ದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ ಕೇವಲ ಆರನೇ ಪಾಯಿಂಟ್‌ನಲ್ಲಿ ಕಳೆಬರ ಪತ್ತೆಯಾಗಿತ್ತು. ನಂತರ 7,8,9,10 ರ ಪಾಯಿಂಟ್‌ನಲ್ಲಿ ಯಾವುದೇ ಅವಶೇಷ ಪತ್ತೆಯಾಗಿರಲಿಲ್ಲ. ಆದರೆ ನಿನ್ನೆ ಪಾಯಿಂಟ್‌ 11ರನ್ನು ಅಗೆಯುವ ಬದಲು ಆನ್‌ ಸ್ಪಾಟ್‌ ಇನ್ನೊಂದು ಸ್ಥಳವನ್ನು ತೋರಿಸಲಾಯ್ತು. ಅಲ್ಲಿ ಒಂದು ಮಾನವ ತಲೆಬುರುಡೆ ಮತ್ತು 50 ಕ್ಕೂ ಹೆಚ್ಚು ಮೂಳೆಗಳನ್ನು ಪತ್ತೆಹಚ್ಚಿದೆ. ಈ ಮೂಳೆಗಳು, ತಲೆಬುರುಡೆಗಳು ಕನಿಷ್ಠ ಮೂರು ಮನುಷ್ಯರಿಗೆ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಶವ ಹೂತಿರುವ ಪಾಯಿಂಟ್ಸ್ ಗುರುತಿಸುವಿಕೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್‌ ಅವರು ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಲ್ಲ, ಎಲ್ಲವೂ ಎಸ್ ಐ ಟಿ ವಿವೇಚನೆಗೆ ಬಿಡಲಾಗಿದೆ. ಅನಾಮಿಕ ವ್ಯಕ್ತಿ ಎಲ್ಲೆಲ್ಲಿ ತೋರಿಸುತ್ತಾನೋ ಅಲ್ಲಿಗೆ ಎಸ್ ಐಟಿ ಹೋಗಿ ಹುಡುಕುತ್ತಾರೆ. ಎಲ್ಲಿ ತನಕ ಅವರು ತನಿಖೆ ಮಾಡುತ್ತಾರೋ ಅಲ್ಲಿವರೆಗೆ ಎಸ್ ಐ ಟಿ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದೇ ವೇಳೆ ಮಾದ್ಯಮಗಳು ಎಸ್ ಐ ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ ಮಾಡಿದ ವಿಚಾರದ ಬಗ್ಗೆ ಮತ್ತೆ ಪ್ರಶ್ನೆ ಕೇಳಿದಾಗ ಧರ್ಮಸ್ಥಳ ಪ್ರಕರಣದ ಬಗ್ಗೆ ಏನೂ ಚರ್ಚೆ ಮಾಡಿಲ್ಲ. ಅವರು ದೆಹಲಿಗೆ ಹೋಗ್ತಾ ಇದಾರಲ್ಲ, ಅದರ ಬಗ್ಗೆ ಚರ್ಚೆ ಮಾಡಿದ್ರು. ಸೇವಾ ಹಿರಿತನದ ಮೇಲೆ ಅವರನ್ನು ದೆಹಲಿಗೆ ಕರೆಸಿಕೊಳ್ತಿದಾರೆ. ಅವರು ಹೋಗ್ತಾರೋ ಇಲ್ಲವೋ ಇನ್ನೂ ಗೊತ್ತಿಲ್ಲ ಎಂದು ಹೇಳಿದರು.

ಇದನ್ನು ಓದಿ: BUS STRIKE: ಸಾರಿಗೆ ನೌಕರರ ಪ್ರತಿಭಟನೆ – ಅಗತ್ಯ ಇಲ್ಲದವರಿಗೂ ಎಲ್ಲಾ ಉಚಿತ ನೀಡ್ತಾರೆ! ನಮ್ಮ ಬಾಕಿ ನೀಡಲು ಮೀನಾಮೇಷ ಯಾಕೆ?

You may also like