Viral ಭಾರತದ ಸನಾತನ ಸಂಸ್ಕೃತಿ ಇದೀಗ ವಿದೇಶಗಳಲ್ಲೂ ಪಸರಿಸುತ್ತಿದೆ. ವಿದೇಶಿಗರು ಇದಕ್ಕೆ ಮಾರುಹೋಗುತ್ತಿದ್ದಾರೆ. ಅಂತೆಯೇ ಅಮೆರಿಕಾದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದ ವೇಳೆ ಬೆಂಕಿ ಬಿದ್ದಿರಬಹುದು ಎಂದು ಭಯಗೊಂಡ ನೆರೆಹೊರೆಯ ಮನೆಯವರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಕರೆಸಿದಂತಹ ಅಚ್ಚರಿಯ ಘಟನೆ ನಡೆದಿದೆ.
ಹೌದು, ಟೆಕ್ಸಾಸ್‌ನಲ್ಲಿ ನೆಲೆಸಿದ್ದ ಭಾರತೀಯ ಕುಟುಂಬ ಇತ್ತೀಚೆಗೆ ತಮ್ಮ ಹೊಸ ಮನೆಯ ಗೃಹಪ್ರವೇಶಕ್ಕಾಗಿ ಈ ಹೋಮ ಹವನ ಆಯೋಜಿಸಿತ್ತು ಎಂದು ವರದಿಯಾಗಿದೆ. ಆದರೆ ಈ ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಬಂದಿರುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಲವರು ಭಾರತೀಯ ಕುಟುಂಬದ ಕ್ರಮವನ್ನು ಸಮರ್ಥಿಸಿಕೊಂಡಿದ್ದರೆ ಮತ್ತೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ @BengaliFalcon71 ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅಮೆರಿಕಾದ ಟೆಕ್ಸಾಸ್‌ನಲ್ಲಿ ಭಾರತೀಯರ ಗುಂಪೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯ ಜನರು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದರು ಎಂದು ಅವರು ಬರೆದುಕೊಂಡಿದ್ದಾರೆ.
ಈ ಕುರಿತಾದ ವಿಡಿಯೋ ಒಂದು ವೈರಲ್ ಆಗಿದ್ದು ವೀಡಿಯೋದಲ್ಲಿ 22 ಸೆಕೆಂಡ್‌ನ ವೀಡಿಯೋದಲ್ಲಿ ಒಂದೆಡೆ ಮನೆಯೊಳಗೆ ಹೋಮ ಹವನ ನಡೆಯುತ್ತಿದ್ದರೆ ಹೊರಗೆ ಅಗ್ನಿಶಾಮಕ ಸಿಬ್ಬಂದಿ ಬಂದು ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
https://www.instagram.com/reel/DM7YfuRoa3Y/?igsh=MW15dTNyeGR2dTQy
