Metro Yellow Line: ಸಾಕಷ್ಟು ವರ್ಷಗಳಿಂದ ಕಾಯ್ತಿದ್ದ ಬೆಂಗಳೂರು ದಕ್ಷಿಣ ಭಾಗದ ಜನರ ಕನಸು ನನಸಾಗುವ ದಿನ ಬಂದೇ ಬಿಟ್ಟಿದೆ.
ಬೆಂಗಳೂರಿನ ಬಹು ನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಆಗಸ್ಟ್ 10 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳದಿ ಮಾರ್ಗ ಪರಿಶೀಲನೆ ನಡೆಸಿದರು.
ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಪರಿಶೀಲನೆ ನಡೆಸಿದ ಡಿಸಿಎಂ, ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ನಿಲ್ದಾಣಕ್ಕೆ ನಮ್ಮ ಮೆಟ್ರೋದಲ್ಲಿ ಡಿಸಿಎಂ ಪ್ರಯಾಣ ಮಾಡಿದರು. ಆರ್.ವಿ.ರೋಡ್ ಟು ಬೊಮ್ಮಸಂದ್ರ ಬಹುನಿರಿಕ್ಷೀತ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳಲಿದ್ದು, ಈಗಾಗಲೇ ಹಳದಿ ಮಾರ್ಗದ ಸುರಕ್ಷತಾ ತಪಾಸಣೆ ಸಕ್ಸಸ್ ಆಗಿ ನಡೆದಿದೆ.
ಕೇಂದ್ರ ಸುರಕ್ಷತಾ ತಪಾಸಣೆ ಯಶಸ್ವಿ ಎಂದು ವರದಿ ಬಂದಿದ್ದು, ಒಟ್ಟು 19.5 ಕಿ.ಮೀ ಉದ್ದದಲ್ಲಿ ಹಳದಿ ಮಾರ್ಗ ಸಿದ್ದವಾಗಿದೆ.
ಆರ್.ವಿ ರಸ್ತೆಯಿಂದ – ಬೊಮ್ಮಸಂದ್ರದ ವರೆಗೆ ಸಂಪರ್ಕ ಕಲ್ಪಿಸಲಿದ್ದು, ಬೊಮ್ಮಸಂದ್ರದವರೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಹಾದು ಹೋಗಲಿದೆ. ಪ್ರತಿದಿನ ಸುಮಾರು 25,000 ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷತೆಗಳೇನು?
19.15 ಕಿ.ಮೀ. ಉದ್ದದ ಹಳದಿ ಮಾರ್ಗ
ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗ
ಸುಮಾರು 5,056.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾರ್ಗ
ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು ಬರಲಿವೆ
ಚಾಲಕ ರಹಿತ ಮೆಟ್ರೋ ಟ್ರೈನ್ ಒಳಗೊಂಡಿರುವ ಹಳದಿ ಮಾರ್ಗ
ಬಹುನಿರೀಕ್ಷಿತ ಆರ್.ವಿ.ರೋಡ್ ಟು ಬೊಮ್ಮಸಂದ್ರ ಮೆಟ್ರೋ ಮಾರ್ಗ ಉದ್ಘಾಟನೆ.
ಡಿಸಿಎಂ ಡಿ.ಕೆ.ಶಿವಕುಮಾರ್ ರಿಂದ ಮೆಟ್ರೋ ಹಳದಿ ಮಾರ್ಗ ವೀಕ್ಷಣೆ ವೇಳೆ ಡಿಸಿಎಂ ಗೆ ಬಿಎಂಆರ್ಸಿಎಲ್ ಎಂಡಿ ಡಾ.ರವಿಶಂಕರ್ ಹಾಗೂ ಅಧಿಕಾರಿಗಳು ಸಾಥ್ ನೀಡಿದ್ದಾರೆ.
