Home » Urea Poroblem: ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಹಿನ್ನೆಲೆ – ಗೊಬ್ಬರ ಕೊಡದಿರುವ ನಡ್ಡಾಗೆ ರಾಜೀನಾಮೆ‌ ಕೊಡಿಸಿ – ಬಿಜೆಪಿ ವಿರುದ್ಧ ಕೃಷಿ ಸಚಿವ ಕಿಡಿ

Urea Poroblem: ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಹಿನ್ನೆಲೆ – ಗೊಬ್ಬರ ಕೊಡದಿರುವ ನಡ್ಡಾಗೆ ರಾಜೀನಾಮೆ‌ ಕೊಡಿಸಿ – ಬಿಜೆಪಿ ವಿರುದ್ಧ ಕೃಷಿ ಸಚಿವ ಕಿಡಿ

0 comments

Urea Poroblem: ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಹಿನ್ನೆಲೆ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಕೇಂದ್ರ ಸರ್ಕಾರ ಗೊಬ್ಬರ ಪೂರೈಕೆ ಮಾಡೋವರೆಗೂ ಈ ಸಮಸ್ಯೆ ಹೀಗೆ ಇರುತ್ತೆ. ಇನ್ನೂ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕೇಂದ್ರ ಸರ್ಕಾರ ಪೂರೈಕೆ ಮಾಡಬೇಕು. ಅಲ್ಲಿಂದ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಏನು ಮಾಡಬೇಕು ಅಂತ ನನಗೂ ಕನ್ಫ್ಯೂಸ್ ಆಗಿದೆ ಎಂದು ಹೇಳಿದರು.

ಬಿಜೆಪಿಯವರು ಕೃಷಿ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರ ಮಾಡಿದ ವಿಷಯವಾಘಿ ಪ್ರತಿಕ್ರಿಯಿಸಿದ ಅವರು, ನನ್ನ ರಾಜೀನಾಮೆ‌ ಯಾಕ್ರೀ ಕೇಳ್ತಾರೆ ಬಿಜೆಪಿಯವರು. ಗೊಬ್ಬರ ಕೊಡದಿರುವ ನಡ್ಡಾ ಹತ್ರ ಅವರು ರಾಜೀನಾಮೆ‌ ಕೊಡಿಸ್ತಾರಾ..? ವಿಪಕ್ಷ ನಾಯಕ ಅಶೋಕ್‌ಗೆ ಆ ತಾಕತ್ತು ಇದೆಯಾ? ಇಷ್ಟೆಲ್ಲಾ ಸಮಸ್ಯೆ ಇದ್ರೂ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ತಿದ್ದೇನೆ. ಒಂದೂವರೆ ಲಕ್ಷ ಮೆಟ್ರಿಕ್ ಟನ್ ಬರಬೇಕಲ್ವ, ಯಾರ ಜವಾಬ್ದಾರಿ ಇದು? ಎಂದು ಪ್ರಶ್ನಿಸಿದರು.

ನಡ್ಡಾಗೆ ರಾಜ್ಯದ ಸಮಸ್ಯೆ ಬಗೆಹರಿಸಲು ಮಾತನಾಡಲು ಸಮಯವಕಾಶ ಕೇಳಿದ್ದೆ. ಆದರೆ ಮೊನ್ನೆ ರಾಜ್ಯಕ್ಕೆ ಬಂದರೂ ಅವಕಾಶ ಕೊಟ್ಟಿಲ್ಲ. ಖಾಸಗಿ ಕಾರ್ಯಕ್ರಮ‌ ಆದರೂ ಎರಡು ನಿಮಿಷ ಸಮಯ ಕೊಡಬಹುದಿತ್ತಲ್ವಾ.? ಏರ್‌ಪೋರ್ಟ್‌ನಲ್ಲಾದರೂ ಟೈಂ ಕೊಡಬಹುದಿತ್ತಲ್ವ. ದೆಹಲಿಯಲ್ಲಿ ಅಧಿಕೃತ ಭೇಟಿಗೂ ಅವಕಾಶ ಕೊಡ್ತಿಲ್ಲ. ನಾವು ಮೋದಿಯವರ ಬಳಿ ಫರ್ಟಿಲೈಸರ್ ಕೇಳವುದು ಸೂಕ್ತವಲ್ಲ. ಬಿಜೆಪಿಯವ್ರೇ ಹೋಗಿ ಗೊಬ್ಬರ ಕೊಡಿ ಅಂತ ನಡ್ಡಾಗೆ ಕೇಳಲಿ ಎಂದು ಹೇಳಿದರು.

ಅಶೋಕಗೆ ಕಾಮನ್ಸ್ ಸೆನ್ಸ್ ಇಟ್ಕೊಂಡು‌ ಮಾತನಾಡಲು ಹೇಳಿ. ಇನ್ನು ಸುಧಾಕರ್ ಬಿಡಿ ಅವರು ಇಂಟರ್‌ನ್ಯಾಷನಲ್ ಫಿಗರ್. ತಪ್ಪು ಅವರ ಕಡೆ ಇಟ್ಟುಕೊಂಡು ನಮ್ಮ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ ಎಂದು ಅಶೋಕ್ ಹಾಗೂ ಸುಧಾಕರ್ ವಿರುದ್ದ ಚೆಲುವರಾಯಸ್ವಾಮಿ ಕಿಡಿ ಕಾರಿದರು.

You may also like