Yellow metro line: ಬೆಂಗಳೂರು ನಾಗರಿಕರ ಹಲವು ದಿನಗಳ ಬೇಡಿಕೆಯಾಗಿದ್ದ ಹಳದಿ ಮೆಟ್ರೋ ಲೈನ್ ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಉದ್ಘಾಟಿಸಿದರು. ಇಂದಿನಿಂದಲೇ ಮೆಟ್ರೋ ರೈಲು ಓಡಾಟ ಆರಂಭವಾಗಿದೆ. ಇಷ್ಟು ದಿನ ಟ್ರಾಫಿಕ್ ನಿಂದ ಬಸವಳಿದಿದ್ದ ಜನಕ್ಕೆ ಮರುಭೂಮಿಯಲ್ಲಿ ಒಯಾಸ್ಸಿ ಸಿಕ್ಕಂತಾಗಿದೆ.
ಬೆಳಿಗ್ಗೆ 6.30 ರಿಂದ ಶುರುವಾದ ಹೊಸ ಹಳದಿ ಮೆಟ್ರೋ ಸಂಚಾರ, ಮೆಟ್ರೋ ಫುಲ್ ರಶ್ ಆಗಿದೆ. ಮೆಟ್ರೋ ದಲ್ಲಿ ಓಡಾಡಲು ಪ್ರಯಾಣಿಕರ ಕ್ಯೂ ನಿಂತಿದ್ದಾರೆ. ಕಳೆದ ಹಲವು ವರ್ಷಗಳಿಂದ ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿಕೊಳ್ತಿದ್ದ ಜನಕ್ಕೆ, ಇಂದಿನಿಂದ ಮೆಟ್ರೋ ಆರಂಭಗೊಂಡಿದ್ದು ಪ್ರಯಾಣಿಕರಿಗೆ ಖುಷಿಯಾಗಿದೆ.
ಸತತ 2ರಿಂದ 3 ಗಂಟೆ ಕಾಲ ಟ್ರಾಫಿಕಲ್ಲಿ ಒದ್ದಾಡ್ತಿದ್ದವ್ರಿಗೆ ಮೆಟ್ರೋ ಆರಂಭವಾಗಿದ್ದರಿಂದ ಬಹಳ ನೆಮ್ಮದಿಯಾದಂತಾಗಿದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರವರೆಗೂ ಟ್ರಾಫಿಕ್ ಜಂಜಾಟ ಇಲ್ಲದೆ ಹೋಗ್ಬಹುದು. ತುಂಬಾ ವರ್ಷದಿಂದ ಈ ಮೆಟಗರೋಗಾಗಿ ಕಾಯ್ತಿದ್ವಿ. ಈಗ ಮೆಟ್ರೋ ಪ್ರಯಾಣ ಖುಷಿ ತಂದಿದೆ ಎನ್ನುತ್ತಿದ್ದಾರೆ ಪ್ರಯಾಣಿಕರು.
Weather report: ರಾಜ್ಯದ ಹವಾಮಾನ ಹೇಗಿದೆ? ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ?
