Home » Dharmasthala Case: ಧರ್ಮಸ್ಥಳ ಕೇಸ್‌ ಕುರಿತು ತನಿಖೆ ಮುಗಿಯುವವರೆಗೂ ಮಾತನಾಡಲ್ಲ: ಜಿ.ಪರಮೇಶ್ವರ್‌

Dharmasthala Case: ಧರ್ಮಸ್ಥಳ ಕೇಸ್‌ ಕುರಿತು ತನಿಖೆ ಮುಗಿಯುವವರೆಗೂ ಮಾತನಾಡಲ್ಲ: ಜಿ.ಪರಮೇಶ್ವರ್‌

0 comments
Dr G parameshwar

Dharmasthala Mass Burial: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ಮುಗಿಯುವವರೆಗೂ ನಾನು ಏನೂ ಮಾತನಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳದ ಹೆಸರು ಹಾಳಾಗುವುದಕ್ಕೆ ಬಿಡುವುದಿಲ್ಲ ಎನ್ನುವ ಹೇಳಿಕೆ ನೀಡಿದ ಜನಾರ್ಧನ ಪೂಜಾರಿ ಅವರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ನ ಹಲವು ಶಾಸಕರು ಇದಕ್ಕೆ ತಮ್ಮ ಸಮ್ಮತವನ್ನು ಕೂಡಾ ಸೇರಿಸದ್ದಾರೆ.

ಈ ಕುರಿತು ಸಾಕಷ್ಟು ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಎಸ್‌ಐಟಿ ತನಿಖೆ ಮುಗಿಯುವವರೆಗೆ ನಾವು ಮಾತನಾಡುವುದು ಸಮಂಜಸವಲ್ಲ, ವಾಸ್ತವಾಂಶ ಏನಿದೆ ಅನ್ನುವುದು ತನಿಖೆ ಮುಗಿದ ಮೇಲೆ ತಿಳಿಯುತ್ತದೆ ಎಂದು ಹೇಳಿದ್ದಾರೆ. 13 ಕಡೆ ಸ್ಥಳ ಗುರುತು ಮಾಡಿದ್ದು, ಈಗ 16,19 ಆಗಿದೆ. ಸದನದಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಅಲ್ಲಿ ಉತ್ತರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

KN Rajanna: ರಾಜಣ್ಣ ರಾಜೀನಾಮೆ: ಸುದ್ದಿಗಾರರ ಪ್ರಶ್ನೆಗೆ ಎರಡು ಕೈ ಮುಗಿದು ಒಳ ಹೋದ ಡಿಕೆಶಿ

You may also like