K N Rajanna: ಕೆ ಎನ್ ರಾಜಣ್ಣರನ್ನ ಸಂಪುಟದಿಂದ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಕಾರಣ ಅಷ್ಟು ವಿವರವಾಗಿ ನನಗೆ ಗೊತ್ತಿಲ್ಲ, ಆದರೆ ಹೈಕಮಾಂಡ್ ನಿರ್ಧಾರ ಮಾಡಿದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವನ್ನ ನಾವು ಗೌರವಿಸುತ್ತೇವೆ. ಆದರೆ ಯಾವ ಕಾರಣಕ್ಕೆ ಅಂತ ಹೇಳಿ ಸ್ಪಷ್ಟವಾಗಿ ನಮ್ಮವರೆಗೂ ಮಾಹಿತಿ ಬಂದಿಲ್ಲ. ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಗೊತ್ತಿರಬಹುದು. ಅದು ನಮ್ಮವರೆಗೂ ಮಾಹಿತಿ ಬಂದಿಲ್ಲ ಎಂದು ಹೇಳಿದರು.
ಯಾವ ಕಾರಣಕ್ಕೆ ಸಂಪುಟದಿಂದ ಕೈ ಬಿಟ್ಟಿದ್ದಾರೆ ಅಂತ ಗೊತ್ತಿಲ್ಲ. ಸ್ವಾಭಾವಿಕವಾಗಿ ರಾಜಣ್ಣ ಅವರಿಗೆ ಅಸಮಾಧಾನ ಇರುತ್ತೆ. ಹೈಕಮಾಂಡ್ ನವರು ರಾಜಣ್ಣರವರನ್ನ ಯಾವ ಕಾರಣಕ್ಕೆ ಕೈ ಬಿಟ್ಟಿದ್ದಾರೆ ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಇನ್ನು ಪರಮೇಶ್ವರ್, ರಾಜಣ್ಣ ರಾಜೇಂದ್ರ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನ್ನ ಬಳಿ ಮಾತನಾಡಿದಾಗ ತುಂಬಾ ಆಶ್ಚರ್ಯವಾಗುತ್ತಾ ಇದೆ. ಏನು ಅಂತ ಅರ್ಥ ಆಗ್ತಿಲ್ಲ ನೀವಾದರೂ ಕೇಳಿ ಹೇಳಿ ಅಂತ ರಾಜಣ್ಣ ತಿಳಿಸಿದರು. ನಿಮಗೆ ಹೈಕಮಾಂಡ್ ನಲ್ಲಿ ಪರಿಚಯಸ್ಥರು ಇದ್ದಾರೆ. ಅವರನ್ನು ಕೇಳಿ ಮಾಹಿತಿ ನೀಡಿ ಅಂತ ನನಗೆ ಹೇಳಿದರು. ಆದರೆ ನಾನು ಯಾರನ್ನು ಕೂಡ ಸಂಪರ್ಕ ಮಾಡಿಲ್ಲ. ಯಾಕೆಂದರೆ ಈಗ ನಿರ್ಧಾರ ಆಗೋಗಿದೆ. ರಾಜೀನಾಮೆ ಕೂಡ ಕೊಟ್ಟು ಆಗೋಗಿತ್ತು ಮತ್ತೆ ನಾವು ಮಾತಾಡೋದ್ರಲ್ಲಿ ಅರ್ಥವಿರಲಿಲ್ಲ ಎಂದು ಹೇಳಿದರು.
ರಾಜಣ್ಣ ರವರನ್ನು ಹೈಕಮಾಂಡ್ ತೆಗೆದು ಹಾಕಿದೆ ಮುಖ್ಯಮಂತ್ರಿಗಳಿಗೆ ರಾಜಣ್ಣ ರನ್ನ ಕೈ ಬಿಡುವಂತೆ ಪತ್ರ ಬರೆಯಲಾಗಿತ್ತು. ರಾಜಣ್ಣರವರನ್ನ ಸಚಿವ ಸ್ಥಾನದಿಂದ ಇಳಿಸುವಲ್ಲಿ ಡಿಕೆಶಿ ಪ್ರಯತ್ನ ಎಂಬ ಆರೋಪ ಇದೆ ಅಂತ ಹಳಲಾಗುತ್ತಿದೆ. ಆದರೆ ಅದರ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್ ಅವರು ನಾವು ಯಾರ ಮೇಲೆ ಚಾಡಿ ಹೇಳಿದರು ಹಾಗೆಯೇ ಕೇಳೋದಿಲ್ಲ. ಅವರದ್ದೇ ಆದಂತ ಅಸೆಸ್ಮೆಂಟ್ ಹಾಗೂ ಮಾಹಿತಿಯನ್ನು ಪಡೆದಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ನಲ್ಲಿ ಸತ್ಯ ಮಾತನಾಡಿದರೆ ತೆಗೆದು ಹಾಕುತ್ತಾರೆ ಎಂಬ ವಿಚಾರ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಹಾಗೇನಿಲ್ಲ ನಮ್ಮಲ್ಲಿ ಹೈಕಮಾಂಡ್ ಗೆ ಬದ್ಧರಾಗಿರಬೇಕು. ಡಿಸಿಪ್ಲಿನ್ ಇರಬೇಕು ಕೆಲ ನಿಬಂಧನೆಗಳು ಯಾವುದೇ ಪಕ್ಷದಲ್ಲಾದರೂ ಇದ್ದೇ ಇರುತ್ತೆ. ಆದ್ದರಿಂದ ಯಾವ ಕಾರಣಕ್ಕೆ ಅವರನ್ನು ತೆಗೆದು ಹಾಕಿದ್ದಾರೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ಹೇಳಿದರು.
School: “ಶಾಲೆಯಲ್ಲಿ ಮೊಟ್ಟೆ ಕೊಡುತ್ತಾರೆ” ಎಂದು 70 ಮಕ್ಕಳನ್ನು ಶಾಲೆ ಬಿಡಿಸಿದ ಪೋಷಕರು!
