C M Siddaramiah : ಭಾರಿ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರ ತೋರಿಸಿದ ಸ್ಥಳಗಳಲ್ಲಿ ಎರಡು ಸ್ಥಳ ಬಿಟ್ಟರೆ ಬೇರೆ ಯಾವ ಸ್ಥಳಗಳಲ್ಲಿಯೂ ಯಾವುದೇ ಕಳೆಬರ ಪತ್ತೆಯಾಗಿಲ್ಲ.
ಅನಾಮಿಕ ದೂರದರ ತೋರಿಸಿದ 13 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ ಆದರೆ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಜೊತೆಗೆ ಅನಾಮಿಕ ಮುಖ್ಯವಾಗಿ ತೋರಿಸಿದ್ದ 13ನೇ ಸ್ಪಾಟ್ ನಲ್ಲಿ ನಿನ್ನೆ (ಆ.12) ರೇಡಾರ್ ಮೂಲಕ ಶವ ಶೋಧನೆ ಕಾರ್ಯ ನಡೆಸಿತ್ತು. ಮುಸುಕುದಾರಿ ದೂರುದಾರ ಗುರುತಿಸಿದ 13ನೇ ಸ್ಥಳದಲ್ಲಿ 18 ಅಡಿ ಆಳದವರೆಗೆ ಎರಡು ಜೆಸಿಬಿ ಮೂಲಕ ಅಗೆಯಲಾಗಿದೆ. ಆದರೆ ಯಾವುದೇ ಕಳೆಬರ ಪತ್ತೆಯಾಗಿಲ್ಲ. ಸದ್ಯ ಇದೆಲ್ಲವನ್ನು ಗಮನಿಸಿದಾಗ ಅನಾಮಿಕ ದೂರದಾರ ಬುರುಡೆ ವಿಚಾರವಾಗಿ ‘ಬುರುಡೆ’ ಬಿಟ್ಟನೆ? ಎಂಬ ಗುಮಾನಿಗಳು ಶುರುವಾಗಿದೆ. ಆದರೆ ಆತ ಕೇವಲ ‘ವಿಜಿಲ್ ಬ್ಲೋವರ್’ ಎಂದು ಕೆಲವರು ಹೇಳುತ್ತಾರೆ. ಅದೇನೆ ಇರಲಿ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ವಿಧಾನಸಭೆಯಲ್ಲಿಯೂ ಕೂಡ ಧರ್ಮಸ್ಥಳ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು 13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್‌ಐಟಿಯ ಶವ ಶೋಧನೆ ಸ್ಥಗಿತ ಮಾಡಬೇಕಾಗಬಹುದು. ಈ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಈ ಕುರಿತಾಗಿ ಮಾತನಾಡಿದ ಅವರು ದೂರುದಾರ ಗುರುತಿಸಿದ 13ನೇ ಸ್ಥಳದಲ್ಲೂ ಶವ ಸಿಗದೇ ಇದ್ದರೆ ಎಸ್‌ಐಟಿ ಶವ ಶೋಧನೆಯನ್ನು ನಿಲ್ಲಿಸಬೇಕಾಗಬಹುದು. ಈ ಬಗ್ಗೆ ಸಚಿವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ. ಎಸ್.ಐಟಿ ಯಿಂದ ಶವ ಶೋಧನೆಯನ್ನು ಮುಂದುವರಿಸಬೇಕಾ ಬೇಡವಾ ಎಂದು ಸರ್ಕಾರ ಚರ್ಚಿಸಿ ತೀರ್ಮಾನ ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈಗ 13ನೇ ಸ್ಪಾಟ್ ನಲ್ಲಿ ಯಾವುದೇ ಆಸ್ತಿ ಪಂಜರ ಪತ್ತೆಯಾಗದ ಕಾರಣ ಸರ್ಕಾರ ಏನು ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Dharmasthala Case: ’30 ಕಡೆ 300 ಹೆಣ ಹೂತಿದ್ದೇನೆ’- ಅನಾಮಿಕ ದೂರುದಾರನಿಂದ ಸ್ಫೋಟಕ ಹೇಳಿಕೆ!!
