Home » Weather Report: ರಾಜ್ಯದಲ್ಲಿ ಜೋರಾದ ಮುಂಗಾರು ಅಬ್ಬರ – ಸ್ವಾತಂತ್ರ್ಯ ದಿನಾಚರಣೆಯ ಪ್ಯಾರಶೂಟ್ ಪ್ರದರ್ಶನ ರದ್ದು

Weather Report: ರಾಜ್ಯದಲ್ಲಿ ಜೋರಾದ ಮುಂಗಾರು ಅಬ್ಬರ – ಸ್ವಾತಂತ್ರ್ಯ ದಿನಾಚರಣೆಯ ಪ್ಯಾರಶೂಟ್ ಪ್ರದರ್ಶನ ರದ್ದು

0 comments

Weather Report: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಭಾರಿ ಮಳೆಯಾಗುವ ಮುನ್ಸೂಚನಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ ಇನ್ನು ಎರಡು ದಿನ ಮೋಡ ಕವಿದ ವಾತವರಣದ ಜೊತೆಗೆ ತುಂತುರು ಮಳೆ ಮುಂದುವರೆಯುವ ಸಾಧ್ಯತೆ ಇದೆ.

ಗರಿಷ್ಟ ಉಷ್ಣಾಂಶ 24ಡಿ.ಸೆ ಹಾಗೂ ಕನಿಷ್ಟ ಉಷ್ಣಾಂಶ 20ಡಿ.ಸೆ ಬೆಂಗಳೂರಲ್ಲಿ ದಾಖಲಾಗಿದ್ದು, ಹೀಗಾಗಿ ಮಳೆಯ ಜೊತೆ ಚುಮುಚುಮು ಚಳಿಯ ಅನುಭವವು ಇರಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಬೆಳಗಾವಿ, ವಿಜಯಪುರ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯು ಗಂಟೆಗೆ 40-50ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ಯಾರಶೂಟ್ ಪ್ರದರ್ಶನ ರದ್ದು ಮಾಡಲಾಗಿದೆ. ಅಕಾಲಿಕ ಮಳೆ, ಮೋಡ ಕವಿದ ವಾತಾವರಣ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ.

ಆಗಸ್ಟ್ 15ರಂದು ಬೆಂಗಳೂರಿನ ಮಾಣಿಕ್ ಷಾ ಪೆರೆಡ್ ಮೈದಾನದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಭರದಿಂದ ಸಾಗಿದೆ. ಪ್ರತಿ ಬಾರಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದ ಪ್ಯಾರಶೂಟ್ ಪ್ರದರ್ಶನವನ್ನು ಈ ಬಾರಿ ನೋಡುವ ಭಾಗ್ಯ ವೀಕ್ಷಕರಿಗೆ ಇಲ್ಲ. ಈ ಬಾರಿ ಮೋಡ ಕವಿದ ವಾತಾವರಣದ ಜೊತೆ, ಮಳೆ ಇರುವ ಕಾರಣ ಅಭ್ಯಾಸಕ್ಕೆ ಅಡ್ಡಿಯಾದ ಹಿನ್ನೆಲೆ ಪ್ರದರ್ಶನವನ್ನು ಕ್ಯಾನ್ಸಲ್ ಮಾಡಲಾಗಿದೆ.

Darshan: ದರ್ಶನ್‌ ಜಾಮೀನು ರದ್ದು: ವಕೀಲ ಚಿದಾನಂದ್ ಹೇಳಿದ್ದೇನು?!

You may also like