Home » Rajeev Kumar: ಮತಗಳ್ಳತನ ಆರೋಪ – ದೇಶ ತೊರೆದರೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್?

Rajeev Kumar: ಮತಗಳ್ಳತನ ಆರೋಪ – ದೇಶ ತೊರೆದರೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್?

0 comments

Rajeev Kumar: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಮತಗಳ್ಳತನ’ ಆರೋಪ ಮಾಡುತ್ತಿದ್ದಂತೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೇಶ ತೊರೆದಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

2024ರ ಲೋಕಸಭಾ ಚುನಾವಣೆ ರಾಜೀವ್ ಕುಮಾರ್ ಅವರ ಮೇಲುಸ್ತುವಾರಿಯಲ್ಲಿ ನಡೆದಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಅವರು ಕಚೇರಿಯನ್ನು ತೊರೆದಿದ್ದರು. ರಾಜೀವ್ ಕುಮಾರ್ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಡೆದ ಚುನಾವಣೆಯಲ್ಲಿ “ಮತ ಕಳ್ಳತನ’ವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಇದೀಗ ಹೊರದೇಶ ತೊರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆದರೆ ರಾಜೀವ್ ಕುಮಾರ್ ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ವದಂತಿಗಳನ್ನು ಅವರ ನಿಕಟವರ್ತಿಗಳು ತಳ್ಳಿ ಹಾಕಿದ್ದು, ಮಾಜಿ ಮುಖ್ಯ ಚುನಾವಣಾ ಆಯುಕ್ತರು ಭಾರತದಲ್ಲಿಯೇ ಇದ್ದಾರೆ. ಮಾಲ್ಟಾದಲ್ಲಿ ನೆಲೆಸಿಲ್ಲ ಎಂದು ಅವರ ಆಪ್ತ ಮೂಲಗಳು ಹೇಳಿವೆ.

Viral Video : ಸೆಕೆಂಡ್ ನಲ್ಲಿ ಮನೆ ಬೀಗ ಒಡೆಯುತ್ತಿದ್ದ ಕಳ್ಳ – ಈತನ ಟ್ರಿಕ್ಸ್ ಕಂಡು ಪೊಲೀಸರೇ ಶಾಕ್

You may also like