Home » Tirupati: ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದಾನ ನೀಡಿದ ಬೆಂಗಳೂರಿನ ಉದ್ಯಮಿ!

Tirupati: ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದಾನ ನೀಡಿದ ಬೆಂಗಳೂರಿನ ಉದ್ಯಮಿ!

0 comments
Tirupati Tour

Tirupati: ಬೆಂಗಳೂರಿನ ಭಕ್ತರೊಬ್ಬರು ತಿರುಪತಿ (Tirupati) ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್‌ಗೆ ರೂ.1 ಕೋಟಿ ದೇಣಿಗೆ ನೀಡಿದ್ದಾರೆ. ಇನ್ನೊಬ್ಬರು ಭಕ್ತರು ವೆಂಕಟೇಶ್ವರನಿಗೆ ವಜ್ರಖಚಿತ ಚಿನ್ನದ ಪದಕವನ್ನು ಕೊಡುಗೆಯಾಗಿ ನೀಡಿದ್ದಾರೆ.

ತಿರುಪತಿಯ ಉಚಿತ ಅನ್ನದಾನ ಕಾರ್ಯಕ್ರಮಕ್ಕೆ ಬೆಂಗಳೂರಿನ ಉದ್ಯಮಿ ಕಲ್ಯಾಣ ರಾಮನ್‌ ಕೃಷ್ಣಮೂರ್ತಿ ರೂ.1 ಕೋಟಿ ಹಾಗೂ ಕೆ.ಎಂ. ಶ್ರೀನಿವಾಸ ಮೂರ್ತಿ 148 ಗ್ರಾಂ ತೂಕದ, ಅಂದಾಜು ₹25 ಲಕ್ಷ ಮೌಲ್ಯದ ಚಿನ್ನದ ಪದಕ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಣೆಯಲ್ಲಿ ತಿಳಿಸಿದೆ.

ತಿರುಮಲದಲ್ಲಿ ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರ ಮೂಲಕ ದೇಣಿಗೆ ಹಸ್ತಾಂತರಿಸಲಾಯಿತು.

You may also like