Mangalore: ಒಪ್ಪೋ ಇಂಡಿಯಾ, ಒಪ್ಪೋ ಕೆ13 ಟರ್ಬೊ ಪ್ರೊ 5ಜಿ ಮತ್ತು ಒಪ್ಪೋ ಕೆ13 ಟರ್ಬೊ 5ಜಿಗಳನ್ನು ಒಳಗೊಂಡ ಒಪ್ಪೋ ಕೆ13 ಟರ್ಬೊ ಸರಣಿ 5ಜಿ ಅನಾವರಣಗೊಳಿಸಿದೆ.
ಭಾರತದ ಮೊದಲ ಸ್ಮಾರ್ಟ್‌ಫೋನ್‌ಗಳು , ಸ್ಮಾರ್ಟ್‌ಫೋನ್ ತಾಪಮಾನ ನಿಯಂತ್ರಣದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತಿವೆ. ಕಾರ್ಯಕ್ಷಮತೆಯನ್ನು ಮೆಚ್ಚುವವರು ಮತ್ತು ಮಲ್ಟಿ-ಟಾಸ್ಕರ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಈ ಸರಣಿ, ಗೇಮಿಂಗ್, ಭಾರೀ ಮಲ್ಟಿ-ಟಾಸ್ಕಿಂಗ್ ಮತ್ತು ದೀರ್ಘಾವಧಿಯ ಔಟ್‌ಡೋರ್ ಬಳಕೆಗೆ ವಿಶೇಷವಾಗಿ ತಯಾರಾಗಿದೆ. ಅತ್ಯಾಧುನಿಕ ಆಕ್ಟಿವ್ ಮತ್ತು ಪ್ಯಾಸಿವ್ ವಿನ್ಯಾಸ, ಶಕ್ತಿಯುತ ಪ್ರೊಸೆಸರ್‌ಗಳು, ಭಾರೀ 7000ಎಂ ಎಎಚ್ ಬ್ಯಾಟರಿ, 80ಡಡಬ್ಲ್ಯೂ ಸೂಪರ್‌ವೂಕ್ಟಮ್ ವೇಗದ ಚಾರ್ಜಿಂಗ್, 120ಎಚ್ ಜಡ್ ಐ-ಫ್ರೆಂಡ್ಲಿ ಇ-ಸ್ಪೋರ್ಟ್ಸ್ ಮಟ್ಟದ ಫ್ಲಾಟ್ ಸ್ಕ್ರೀನ್‌ಗಳನ್ನು ಹೊಂದಿರುವ ಕೆ13 ಟರ್ಬೊ ಸರಣಿ, ಅತ್ಯಂತ ಬೇಡಿಕೆಯ ಪರಿಸ್ಥಿತಿಗಳಲ್ಲಿಯೂ ಸಹ ನಿರಂತರ, ಉನ್ನತ ಅನುಭವ ಒದಗಿಸುತ್ತದೆ.ಇಂದಿನ ಚುರುಕಾದ ಮತ್ತು ಕಾರ್ಯಕ್ಷಮತೆಯನ್ನೇ ಮೆಚ್ಚುವ ಯುವಕರಿಗೆ ಇದು ಮೆಚ್ಚಿನ ಆಯ್ಕೆಯಾಗಿದೆ ಎಂದು ಸಂಸ್ಥೆ ಹೇಳಿದೆ.
