Home » Lakshmi Hebbalkar: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Lakshmi Hebbalkar: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

0 comments
Gruha Lakshmi Scheme

Lakshmi Hebbalkar: ಸರ್ಕಾರ ಧರ್ಮಸ್ಥಳದ (Dharmasthala) ಜೊತೆಗೆ ಇರುತ್ತದೆ. ಅನಾಮಿಕ ನೂರಾರು ಕಲ್ಪನೆಯ ಕಥೆ ಹೇಳುತ್ತಿದ್ದಾನೆ. ಸರ್ಕಾರದ ದಿಕ್ಕು ತಪ್ಪಿಸಿದವರನ್ನು ನಾವು ಬಿಡೋದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

ಧರ್ಮಸ್ಥಳ ಬಹಳ ಪವಿತ್ರವಾದದ್ದು, ಅಲ್ಲಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಗುಂಡಿ ಮೇಲೆ ಗುಂಡಿ ತೋಡಿದರೂ, ಬೆಟ್ಟ ಅಗೆದರು ಇಲಿಯೂ ಸಿಗಲಿಲ್ಲ. ಸರ್ಕಾರ ಧರ್ಮಸ್ಥಳದ ಜೊತೆಗೆ ಯಾವತ್ತೂ ಇರುತ್ತದೆ ಎಂದಿದ್ದಾರೆ.

ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಮಹಲ್ ಕಟ್ಟಿದರು. ಆಗ ಆರೋಪ ಮಾಡಿದ್ದು ಇದೇ ಬಿಜೆಪಿ, ಈಗ ಗೋಸುಂಬೆ ಕಣ್ಣೀರು ಹಾಕುತ್ತಿರುವುದು ಇದೇ ಬಿಜೆಪಿ. ರಾಜ್ಯ, ದೇಶ ವಿದೇಶದಲ್ಲೂ ಈ ವಿಚಾರ ಚರ್ಚೆಯಾಯಿತು. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿದವರಿಗೆ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ಬದ್ಧತೆ ಮತ್ತು ಕಾಳಜಿ ಇದೆ. ಧರ್ಮಸ್ಥಳ ಎಂದರೆ ಧರ್ಮದಿಂದ ನಡೆದುಕೊಳ್ಳುವ ಸ್ಥಳ. ಧರ್ಮಸ್ಥಳಕ್ಕೆ ಕಳಂಕ ಕಟ್ಟುವ ಕೆಲಸ ನಿಲ್ಲಬೇಕು. ಸೌಜನ್ಯ ಪ್ರಕರಣ ಮತ್ತು ರಾಜ್ಯದ ಹೆಣ್ಣು ಮಕ್ಕಳ ನೋವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

Puttur: ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ!

You may also like