Home » Mysore Dasara: ಅನನ್ಯ ಸಾಮರ್ಥ್ಯದ ಅಭಿಮನ್ಯು ತಾಲೀಮು – ಅಭಿಮನ್ಯು ಮುಂದಾಳತ್ವದಲ್ಲಿ ಲೆಫ್ಟ್‌ ರೈಟ್‌ ಹೊರಟ ಗಜಪಡೆ

Mysore Dasara: ಅನನ್ಯ ಸಾಮರ್ಥ್ಯದ ಅಭಿಮನ್ಯು ತಾಲೀಮು – ಅಭಿಮನ್ಯು ಮುಂದಾಳತ್ವದಲ್ಲಿ ಲೆಫ್ಟ್‌ ರೈಟ್‌ ಹೊರಟ ಗಜಪಡೆ

0 comments

Mysore Dasara: ಅಭಿಮನ್ಯು ಅನನ್ಯ ಸಾಮರ್ಥ್ಯ ಹೊಂದಿರುವ ಆನೆ. ದಸರಾದಲ್ಲಿ ಅಂಬಾರಿ ಹೊರುವುದರಲ್ಲಿ ಮಾತ್ರವಲ್ಲದೆ ನಾಡಿನತ್ತ ಬರುವ ವನ್ಯಜೀವಿಗಳ ಸೆರೆ ಕಾರ್ಯಾಚರಣೆಯಲ್ಲಿಯೂ ಅದು ಅತ್ಯಂತ ಶಕ್ತಿಶಾಲಿಯಾಗಿ ವರ್ತಿಸುತ್ತದೆ ಎಂದು ಆರಮನೆ ಗಜಪಡೆ ಶಿಬಿರದ ಆವರಣದಲ್ಲಿ ಮೈಸೂರು ಉಪ ಅರಣ್ಯ ಸಂರಕ್ಷ ಣಾಧಿಕಾರಿ (ವನ್ಯಜೀವಿ ವಿಭಾಗ) ಡಾ.ಐ.ಬಿ. ಪ್ರಭುಗೌಡ ಹೇಳಿದರು.

ಬೆಳಗ್ಗೆ ಮತ್ತು ಸಂಜೆ ಸಯ್ಯಾಜಿರಾವ್ ರಸ್ತೆಯಲ್ಲಿ ನಡಿಗೆ ತಾಲೀಮು ನಡೆಸಲಾಗುತ್ತಿದೆ. ಜಂಬೂಸವಾರಿಯಂದು 10ರಿಂದ 12 ಲಕ್ಷ ಜನ ಸೇರುತ್ತಾರೆ. ಅಂದು ಯಾವುದೇ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಬೆಳಗ್ಗೆ ಮತ್ತು ಸಂಜೆ ತಾಲೀಮು ಮೂಲಕ ಅವುಗಳನ್ನು ಸಜ್ಜು ಗೊಳಿಸಲಾಗುತ್ತಿದೆ. ಮೊದಲ ತಂಡದ ಎಲ್ಲಾ ಆನೆಗಳು ದಸರಾದಲ್ಲಿ ಈ ಹಿಂದೆ ಪಾಲ್ಗೊಂಡಿರುವ ಕಾರಣ ಇಲ್ಲಿನ ವಾತಾವರಣಕ್ಕೆ ಅವು ಹೊಂದಿಕೊಳ್ಳುವುದು ಸುಲಭವೇ. ಹಾಗಾಗಿ 1 ಅವುಗಳಿಗೆ ಅವುಗಳಿಗೆ ಹೆಚ್ಚು ವರಿಯಾಗಿ ಬೇರೆನೂ ಮಾಡುವ ಅಗತ್ಯ ಕಂಡುಬಂದಿಲ್ಲ ಎಂದು ತಿಳಿಸಿದರು.

ಅಭಿಮನ್ಯು ಅತ್ಯಂತ ಬಲಶಾಲಿ. ಜಂಬೂ ಸವಾರಿಯಲ್ಲಿ 750 ಕೆಜಿ ಅಂಬಾರಿ ಸೇರಿದಂತೆ ನವ್ವ, ಗಾದಿ, ಮಾವುತ ಸೇರಿದಂತೆ ಸಾವಿರ ಕೆಜಿ ಭಾರವನ್ನು ಅಭಿಮನ್ಯು ಹೊತ್ತು ಸಾಗುತ್ತದೆ. 5.500 ಕೆಜಿ ಅಭಿಮನ್ಯುವಿಗೆ ಸಾವಿರ ಕೆಜಿ ಹೊತ್ತು ಸಾಗುವುದು ಅಂತಹ ತ್ರಾಸದಾಯಕವಲ್ಲ. ಮಾವುತನ ಸೂಚನೆಗಳನ್ನು ಕೇಳಿ ಆದರಂತೆ ನಡೆದುಕೊಳ್ಳುವ ಸೌಮ್ಯ ಸ್ವಭಾವದ ಆನೆ ಅಭಿಮನ್ಯು ಎಂದರು.

ತಾಲೀಮು ಸಂದರ್ಭದಲ್ಲಿ ಈವರೆಗೆ ವಾಹನಗಳ ಹಾರ್ನ್‌ ಗೂ ಯಾವುದೇ ಆನೆಗಳು ಗಲಿಬಿಲಿಗೊಂಡಿಲ್ಲ. ಎರಡನೇ ತಂಡದಲ್ಲಿ ಎರಡು ಆನೆಗಳು ಹೊಸದಾಗಿ ಬರುತ್ತಿದ್ದು, ದಸರಾ ಮಹೋತ್ಸವಕ್ಕೆ ಅವು ಇದೇ ಮೊದಲ ಬಾರಿ ಪಾಲ್ಗೊಳ್ಳುತ್ತಿರುವ ಕಾರಣ ಅವುಗಳನ್ನು ಈಗಾಗಲೇ ಉತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಮಧ್ಯೆ ಇರಿಸಿ ತಾಲೀಮು ನಡೆಸಲಾಗುವುದು. ಆನೆ ಅತ್ಯಂತ ಬುದ್ಧಿವಂತ ಪ್ರಾಣಿ. ಹಾಗಾಗಿ ಯಾವುದೇ ವಾತಾವರಣಕ್ಕೂ ಬಹು ಬೇಗ ಹೊಂದಿಕೊಳ್ಳುವ ಗುಣ ಹೊಂದಿವೆ. ಪ್ರತಿದಿನ 8 ರಿಂದ 9 ಕಿ.ಮೀ. ತಾಲೀಮು (ನಡಿಗೆ) ಇದ್ದೇ ಇರುತ್ತದೆ. ಬನ್ನಿಮಂಟಪದವರೆಗೆ ಹೋದಲ್ಲಿ ಆರೇಳು ಕಿ.ಮೀ. ಹೆಚ್ಚಾಗಲಿದೆ ಎಂದು ವಿವರಿಸಿದರು.

You may also like