Rishi Sunak: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ತಂದೆ ಯಶೀರ್ ಸುನಕ್ ಹಾಗೂ ತಾಯಿ ಉಷಾ ಸುನೆಕ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಸಾಂಸ್ಕೃತಿಕ ನಗರಿ ಮೈಸೂರಿಗೆ ಸೋಮವಾರ ಭೇಟಿ ನೀಡಿದ್ದರು.
ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಶ್ರೀ ರಾಘ ವೇಂದ್ರಸ್ವಾಮಿ ಮಠಕ್ಕೆ ಯಶ್ವೀರ್ ದಂಪತಿ ಇಂದು ಬೆಳಿಗ್ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸೊಸೆ ಅಕ್ಷತಾ ಮೂರ್ತಿ ಅವರ ತಂದೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾದ ಎನ್. ಆರ್.ನಾರಾಯಣ ಮೂರ್ತಿ ಅವರ ಜೊತೆ ಇದ್ದರು.
ಮೈಸೂರಿನ ಕೃಷ್ಣಮೂರ್ತಿಪುರಂನ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ತಂದೆ ಯಶ್ವೀರ್ ಸುನಕ್, ತಾಯಿ ಉಷಾ ಸುನಕ್ ಹಾಗೂ ಇವರ ಬೀಗರಾದ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅವರು ಭೇಟಿ ನೀಡಿ, ರಾಯರ ದರ್ಶನ ಪಡೆದರು.
ಮಠದಲ್ಲಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ, ಯಶೀರ್ ಹಾಗೂ ಉಷಾ ದಂಪತಿ ಕೆಲ ಸಮಯ ಸನ್ನಿಧಿ ಯಲ್ಲಿದ್ದರು. ಈ ವೇಳೆ ಮಠ ದಲ್ಲಿರುವ ಹಸುಗಳಿಗೆ ಬಾಳೆಹಣ್ಣು ಹಾಗೂ ಬೆಲ್ಲ ತಿನ್ನಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಯಶ್ವೀರ್ ಅವರು, ಈ ಹಿಂದೆ ಹಲವು ಬಾರಿ ನಾನು ಮೈಸೂರಿಗೆ ಭೇಟಿ ನೀಡಿದ್ದೆ. ಆದರೆ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ನೀಡಿರಲಿಲ್ಲ. ಈಗ ಮಠದಲ್ಲಿ ವಿಶೇಷ ಪೂಜೆಸಲ್ಲಿಸಿರುವೆ ಎಂದರು.
ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರ ಮೂಲ ಬೃಂದಾವನ ದರ್ಶನ ಪಡೆದಿದ್ದೆವು. ಈಗ ಮೈಸೂರಿನ ಮಠಕ್ಕೂ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದೇವೆ ಎಂದರು.
KRS Dam: ಕೆಆರ್‌ಎಸ್ ಜಲಾಶಯದಿಂದ 1.20 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆ – ನದಿ ಪಾತ್ರದಲ್ಲಿ ಪ್ರವಾಹ ಭೀತಿ
