Home » Manika Vishwakarma: ಮಣಿಕಾ ವಿಶ್ವಕರ್ಮ ಗೆ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ!

Manika Vishwakarma: ಮಣಿಕಾ ವಿಶ್ವಕರ್ಮ ಗೆ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ!

0 comments

Manika Vishwakarma: ರಾಜಸ್ಥಾನದ ಉದಯೋನ್ಮುಖ ತಾರೆ ಮಣಿಕಾ ವಿಶ್ವಕರ್ಮ (Manika Vishwakarma) 2025 ರ ಮಿಸ್ ಯೂನಿವರ್ಸ್‌ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಜೈಪುರದಲ್ಲಿ ನಡೆದ ರಾಷ್ಟ್ರೀಯ ಫೈನಲ್ ಸ್ಪರ್ಧೆಯಲ್ಲಿ 24 ವರ್ಷದ ಮಣಿಕಾ ಗೆಲುವು ಸಾಧಿಸುವ ಮೂಲಕ ಇದೀಗ ರಾಷ್ಟ್ರದಿಂದ ಜಾಗತಿಕ ವೇದಿಕೆಯತ್ತ ತಮ್ಮ ಹೆಜ್ಜೆಯನ್ನು ಹಾಕುವ ಮೂಲಕ ನಿರೀಕ್ಷೆ ಮೂಡಿಸಿರುವುದಾಗಿ ವರದಿ ತಿಳಿಸಿದೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮಿಸ್‌ ಯೂನಿವರ್ಸ್ ಇಂಡಿಯಾ 2024ರ ರಿಯಾ ಸಿಂಘಾ ಮಣಿಕಾ ವಿಶ್ವಕರ್ಮಗೆ ಕಿರೀಟ ತೊಡಿಸಿ ಶುಭ ಹಾರೈಸಿದ್ದಾರೆ. ಸೋಮವಾರ ನಡೆದ ಸ್ಪರ್ಧೆಯಲ್ಲಿ ಮಣಿಕಾ ಅವರೊಂದಿಗೆ ಮೊದಲ ರನ್ನರ್ ಅಪ್ ಆಗಿ ಉತ್ತರ ಪ್ರದೇಶದ ತಾನ್ಯಾ ಶರ್ಮಾ, ಎರಡನೇ ರನ್ನರ್ ಅಪ್ ಆಗಿ ಹರ್ಯಾಣದ ಮೆಹಕ್ ಧಿಂಗ್ರಾ ಹಾಗೂ ಮೂರನೇ ರನ್ನರ್ ಅಪ್ ಆಗಿ ಅಮಿಶಿ ಕೌಶಿಕ್ ನಗು ಬೀರಿದ್ದಾರೆ.

ಮಣಿಕಾ ಅವರು ನವೆಂಬರ್ 21ರಂದು ಥಾಯ್ಲೆಂಡ್ ನಲ್ಲಿ ನಡೆಯಲಿರುವ 74ನೇ ಮಿಸ್ ಯೂನಿವರ್ಸ್ ಜಾಗತಿಕ ವೇದಿಕೆಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿ ವಿವರಿಸಿದೆ.

Pak Flood: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – ಕೊಚ್ಚಿ ಹೋದ ಇಡೀ ಪಟ್ಟಣ -330ಕ್ಕೂ ಹೆಚ್ಚು ಮಂದಿ ಸಾವು

You may also like