Bandipura Forest: ನಿರಂತರವಾಗಿ ಸುರಿ ಯುತ್ತಿರುವ ಮಳೆಯಿಂದ ಬಂಡೀಪು ರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದ್ದು, ಅರಣ್ಯ ಪ್ರದೇಶದ ದೊಡ್ಡದೊಡ್ಡ ಕೆರೆಗಳು ಮತ್ತು ಕಟ್ಟೆಗಳು ತುಂಬ ಕೋಡಿ ಹರಿಯುತ್ತಿದೆ ಈ ಬಾರಿ ವನ್ಯಜೀವಿಗಳಿಗೆ ವರ್ಷ ಪೂರ್ತಿ ಸಮೃದ್ಧ ನೀರು ದೊರಕುವಂತಾಗಿದೆ.
ಹಸಿರು ಹೊದ್ದು ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಡೀಪುರ ಅರಣ್ಯದಲ್ಲಿ ಹಿಂಡುಹಿಂಡಾಗಿ ಸಂಚರಿಸುವ ಚುಕ್ಕೆ ಜಿಂಕೆಗಳು, ದೊಡ್ಡ ದೊಡ್ಡ ಮರದ ಮೇಲೆ ಕುಳಿತು ಶಿಕಾರಿಗೆ ಹೊಂಚುವ ಚಿರತೆಗಳು, ರಸ್ತೆ ಬದಿಗಳಲ್ಲಿ ಕಂಡು ಬರುವ ಆನೆಗಳ ಗುಂಪು, ಕೆರೆಗಳ ಬಳಿ ದರ್ಶನ ನೀಡುವ ಹುಲಿಗಳು, ನವಿಲುಗಳು, ಕಾಡೆಮೆಗಳು ಪ್ರವಾಸಿಗರನ್ನು ಬಂಡೀಪುರದತ್ತ ಸೆಳೆಯುತ್ತಿವೆ.
ಈ ದಾರಿ ಪೂರ್ವ ಮುಂಗಾರು ಮಳೆ ಅವಧಿಗೂ ಮುನ್ನ ಆರಂಭವಾಗಿರುವುದ ರಿಂದ ಬಂಡೀಪುರ ವಲಯದ 51 ಕೆರೆಗೆ ಳಲ್ಲಿ ಶೇ 90ಕ್ಕೂ ಹೆಚ್ಚು ಕರೆ-ಕಟ್ಟೆಗಳು ತುಂಬ ಹರಿಯುತ್ತಿವೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಎಲ್ಲಾ ಕೆರೆಗಳೂ ಭರ್ತಿಯಾಗಿ ಕೋಡಿಬಿದ್ದ ಪರಿಣಾಮ ಹಳ್ಳಕೊಳ್ಳಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ.
ಬಂಡೀಪುರ ವಲಯದ ಎಲ್ಲಾ ಕೆರೆಗಳಲ್ಲಿಯೂ ಹೂಳೆತ್ತಿದ್ದರಿಂದ ಪೂರ್ವ ಮುಂಗಾರಿನಲ್ಲಿಯೇ ಬಹುತೇಕ ಕೆರೆಗಳಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದೆ. ಹಸಿರಿನಿಂದ ಕಂಗೊಳಿ ಸುವ ಅರಣ್ಯ ಹಾಗೂ ವನ್ಯಜೀವಿಗಳ ದರ್ಶನ ಪಡೆಯಲು ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಬಂಡೀಪುರ ವಲಯದ ವಲಯಾರಣ್ಯಾಧಿಕಾರಿ ಎನ್.ಸಿ.ಮಹದೇವ ಮಾಹಿತಿ ನೀಡಿದ್ದಾರೆ.
ಕೆರೆಗಳ ಹೂಳೆತ್ತಿಸಿದ ಅರಣ್ಯ ಇಲಾಖೆ: ಕಳೆದ ವರ್ಷ ಆರಣ್ಯ ಇಲಾಖೆ ಬೇಸಿಗೆ ಸಂದರ್ಭದಲ್ಲಿ ಮಳೆನೀರು ಹರಿಯುತ್ತಿದ್ದ ಕಾಲುವೆಗಳನ್ನು ಪುನಶ್ಚತನಗೊಳಿಸಿತ್ತು. ದೊಡ್ಡ ದೊಡ್ಡ ಕೆರೆಗಳಲ್ಲಿ ತುಂಬಕೊಂಡಿದ್ದ ಹೂಳೆತ್ತಿಸಿ ಅದರ ಮಣ್ಣನ್ನು ಕೆರೆಗಳ ಏರಿಗಳ ಮೇಲೆ ಹಾಕಿಸಿತ್ತು. ಮೂರ್ಕೆರೆ. ಸುಬ್ಬರಾ ಯನಕಟ್ಟೆ, ಕೊಳಕುಮಲ್ಲಿ ಕೆರೆ, ಕಿರುಬನ ಕೊಳ, ಮೂಲಾಪುರ ಕೆರೆ ಮುಂತಾದ ಕೆರೆಗಳೂ ಕೋಡಿ ಬಿದ್ದು ಇದೇ ಮೊದಲ ಬಾರಿಗೆ ಮಂಗಲ ಡ್ಯಾಂಗೆ ನೀರು ಹರಿಯುತ್ತಿದೆ.
ಹರಿವ ನೀರಿಗೆ ಕೊರೆದ ರಸ್ತೆಗಳು: ವಲಯದ ಎಲ್ಲಾ ಕೆರೆಗಳಿಂದ ಕೋಡಿ ಬಿದ್ದ ನೀರು ಏಕಕಾಲದಲ್ಲಿ ಬರುಸಾಗಿ ಹರಿಯಲಾರಂಭಿಸಿವೆ. ಸೇತುವೆಗಳ ಮೇಲೂ ನೀರು ಹರಿಯುತ್ತಿದ್ದು ಇದರ ರಭಸಕ್ಕೆ ಬಂಡೀಪುರ ಸಫಾರಿ ವಲಯದ ಹಲವು ರಸ್ತೆಗೆ ಇಲ್ಲಿ ಕೊರಕಲುಂಟಾಗಿದೆ. ಅರಣ್ಯ ಪ್ರದೇಶವು ಬಿಸಿಲನ್ನೇ ಕಾಣದ ಪರಿಣಾಮ ಸಫಾರಿ ಮಾರ್ಗದ ಎಲ್ಲಾ ರಸ್ತೆಗಳೂ ಕೆಸರು ಗದ್ದೆಗಳಂತಾಗಿವೆ. ಇದರಿಂದ ಈ ರಸ್ತೆಗಳಲ್ಲಿ ಸಹಾರಿ ವಾಹನಗಳ ಸಂಚಾರಕ್ಕೆ ಸ್ವಲ್ಪಮಟ್ಟಿಗೆ ತೊಂದರೆಯಾಗುತ್ತಿದೆ.
ಬಂಡೀಪುರದ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರಿಗೆ ರಸ್ತೆ ಬದಿಗಳ ಲ್ಲಿಯೇ ಎಲ್ಲೆಂದರಲ್ಲಿ ಚುಕ್ಕೆ ಜಿಂಕೆಗಳು, ಆನೆಗಳ ಹಿಂಡು, ಕರಡಿ ಮುಂತಾದ ವನ್ಯಜೀವಿಗಳು ದರ್ಶನ ನೀಡುತ್ತಿದ್ದರೆ, ಸಫಾರಿಗೆ ಹೋಗುವ ಪ್ರವಾಸಿಗರಿಗೆ ಎಲ್ಲಾ ಕೆರೆಗಳ ಸುತ್ತಮುತ್ತಲೂ ಹುಲಿ ಚಿರತೆ, ಆನೆ, ಕಾಟ, ಕನ್ನಾಯಿ ಮುಂತಾ ದವು ಕಾಣಸಿಗುತ್ತಿವೆ. ಇದರಿಂದ ಪ್ರತಿ ದಿನವೂ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಕೆರೆಗಳಲ್ಲಿ ಮಲಗಿರುವ ಇಲ್ಲವೇ ನೀರು ಕುಡಿಯಲು ಬರುವ ಭೀಮ ಹೆಸರಿನ ಹುಲಿಯನ್ನು ನೋಡಲು ಸಫಾರಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಹಿಂಡು ಹಿಂಡಾಗಿ ಸಂಚರಿಸುವ ಚುಕ್ಕೆ ಜಿಂಕೆಗಳು ಎಲ್ಲರ ಮನಸೂರೆಗೊಳ್ಳುತ್ತಿವೆ. ಪೊದೆಗಳಿಂದ ಹೊರಬರುವ ಕರಣ, ಕೊಂಬೆಗಳ ಮೇಲೆ ಮಲಗಿರುವ ಚಿರತೆ, ಹತ್ತಾರು ವಾಹನಗಳು ನೂರಾರು ಜನರಿದ್ದರೂ ಲೆಕ್ಕಿಸದ ಹುಲಿಗಳು, ಕೆರೆಗಳ ಬಳಿಯಲ್ಲಿ ಸಂಚರಿಸುವ ಹುಲಿಗಳು ಪ್ರವಾಸಿಗರ ಎದೆಬಡಿತ ಹೆಚ್ಚಿಸುತ್ತಿವೆ.
DEVIL: ದರ್ಶನ್ ನಟನೆಯ ಡೆವಿಲ್ ಸಿನಿಮಾ: ಆ. 24 ರಂದು ಫಸ್ಟ್ ಸಾಂಗ್ ರಿಲೀಸ್
