Mobile number link: ಚಾಲನಾ ಪರವಾನಗಿ (ಡಿಎಲ್) ಹೊಂದಿರುವ ಚಾಲಕರು ಹಾಗೂ ವಾಹನಗಳ ನೋಂದಣಿ ಪ್ರಮಾಣ ಪತ್ರ (ಆರ್ ಸಿ) ಹೊಂದಿರುವ ವಾಹನ ಮಾಲೀಕರು ಕೂಡಲೇ ತಮ್ಮ ಡಿಎಲ್ ಹಾಗೂ ಆರ್‌ಸಿಗೆ ಮೊಬೈಲ್ ನಂಬರ್ ಅನ್ನು ತ್ವರಿತವಾಗಿ ಲಿಂಕ್ ಅಥವಾ ನವೀಕರಿಸಬೇಕು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಾರಿಗೆ ಇಲಾಖೆಯ ಜೊತೆ ಉತ್ತಮ ಸಂವಹನ, ಸಂಪರ್ಕ ಹೊಂದಲು ಮೊಬೈಲ್ ನಂಬರ್ ಅನ್ನು ಡಿಎಲ್ ಹಾಗೂ ಆರ್‌ಸಿಗೆ ಲಿಂಕ್ ಮಾಡುವುದು ಕಡ್ಡಾಯ ವಾಗಿದೆ. ಸಾರಿಗೆ ಸಂಬಂಧಿತ ಸೇವೆಗಳಲ್ಲಿ ಸುಧಾರಣೆ ತರಲು ಈ ಪ್ರಕ್ರಿಯೆ ಅತ್ಯವಶ್ಯವಾಗಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಡಿಎಲ್ ಹಾಗೂ ಆರ್‌ಸಿ ಹೊಂದಿರುವ ವಾಹನ ಚಾಲಕರು ಹಾಗೂ ಮಾಲೀಕರು ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ತಾತ್ಕಾಲಿಕವಾಗಿ ನವೀಕರಿಸಿರುವುದು ಕಂಡು ಬಂದಿದೆ. ಇದರ ಪರಿಣಾಮವಾಗಿ ಪ್ರಮುಖ ಸೇವೆಗಳಿಗೆ ಸಂಬಂಧಿ ಸಿದ ಎಚ್ಚರಿಕೆಗಳು, ಶಾಸನಬದ್ಧ ಸೂಚನೆಗಳು ಹಾಗೂ ಇತರೆ ಸಂವಹನಗಳು ವಾಹನ ಚಾಲಕರು, ಮಾಲೀಕರಿಗೆ ತಲುಪುತ್ತಿಲ್ಲ ಎಂದು ಹೇಳಿದೆ.
ಸಾರಿಗೆ ರಾಷ್ಟ್ರೀಯ ನೋಂದಣಿ ಮೂಲಕ ಸಾರಿಗೆ ಇಲಾಖೆಯ ನಿಖರ ಮಾಹಿತಿ ಮತ್ತು ಹಲವು ವಿವರಗಳನ್ನು ಸಕಾಲಕ್ಕೆ ತಲುಪಿಸಲು ಡಿಎಲ್ ಮತ್ತು ಆರ್ ಸಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆ ಪ್ರತಿಯೊಬ್ಬ ವಾಹನ ಚಾಲಕ ಮತ್ತು ಮಾಲೀಕ ಡಿಎಲ್ ಮತ್ತು ಆರ್ಸಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊ ಳ್ಳುವುದು ಅತ್ಯವಶ್ಯ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವಾ ಲಯ ಅಭಿಪ್ರಾಯಪಟ್ಟಿದೆ. ತಪ್ಪು ಮಾಡಿದಾಗ ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಮೊಬೈಲ್ ಫೋನ್ ಸಂಖ್ಯೆ ಹಾಗೂ ವಿಳಾಸಗಳನ್ನು ಬದಲಾವಣೆ ಮಾಡಿಕೊಳ್ಳುವ ವಾಹನ ಚಾಲಕರು ಹಾಗೂ ಮಾಲೀಕರ ಧೋರಣೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
ವಾಹನ ಕಳ್ಳತನವಾದ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಗೆ ಒಟಿಪಿ ಖಚಿತಪಡಿಸಿಕೊಳ್ಳಲಾಗುತ್ತದೆ. ಇದರಿಂದ ವಾಹನ ಕಳ್ಳತನ ಹಾಗೂ ಮೋಸದಿಂದ ವಾಹನ ಮಾಲೀಕತ್ವ ವರ್ಗಾವಣೆ ಯನ್ನು ತಡೆಗಟ್ಟಬಹುದು ಎಂದು ಸಾರಿಗೆ ಇಲಾಖೆ ಚಿಂತನೆ ಮಾಡಿ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದೆ.
