Fancy Number: ಹೊಸ ವಾಹನ ಕೊಂಡುಕೊಳ್ಳುವಾಘ ತಮ್ಮ ವಾಹನಕ್ಕೆ ಫ್ಯಾನ್ಸಿ ನಂ ತಗೋಬೇಕು ಅನ್ನೋದು ಅನೇಕರ ಆಸೆಯಾಗಿರುತ್ತದೆ. ಅದಕ್ಕಾಗಿ ಎಷ್ಟು ಬೇಕಾದರು ಬೆಲೆ ತೆರಲು ಕೆಲವರು ಸಿದ್ದರಾಗಿರುತ್ತಾರೆ. ಇದೀಗ ಚಂಡೀಗಢದಲ್ಲಿ ಬಹು ಬೇಡಿಕೆಯಿರುವ ‘0001’ ವಿಶೇಷ ವಾಹನ ನೋಂದಣಿ ಸಂಖ್ಯೆ ಹರಾಜಾಗಿದೆ. ಇದಎ ಬೆಲೆ ಕೇಳಿದ್ರೆ ನೀವು ಶಾಕ್ ಆಗುತ್ತೀರಿ.
ಈ ನಂಬರ್ ಇದುವರೆಗಿನ ಅತ್ಯಧಿಕ (₹36.43 ಲಕ್ಷ) ಬಿಡ್ ಸಿಕ್ಕಿದೆ. ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ (RLA), ಚಂಡೀಗಢ ಆಗಸ್ಟ್ 19ರಿಂದ 22ರವರೆಗೆ ಹಿಂದಿನ ಸರಣಿಯ ಕೆಲವು ಉಳಿದ ಫ್ಯಾನ್ಸಿ ಮತ್ತು ವಿಶೇಷ ನೋಂದಣಿ ಸಂಖ್ಯೆಗಳೊಂದಿಗೆ 0001ರಿಂದ 9999ರವರೆಗಿನ ಹೊಸ ಸರಣಿಯ ‘CH01-DA’ ಇ-ಹರಾಜನ್ನು ನಡೆಸಿತ್ತು. ಒಟ್ಟು 577 ನೋಂದಣಿ ಸಂಖ್ಯೆಗಳ ಹರಾಜಿನೊಂದಿಗೆ, ಆರ್‌ಎಲ್‌ಎ ಇದುವರೆಗಿನ ಅತ್ಯಧಿಕ 4.08 ಕೋಟಿ ರೂ. ಆದಾಯವನ್ನು ಗಳಿಸಿತು. ಇದಕ್ಕೂ ಮೊದಲು, ಈ ವರ್ಷದ ಮೇ ತಿಂಗಳಲ್ಲಿ ಆರ್‌ಎಲ್‌ಎ ಎರಡನೇ ಅತಿ ಹೆಚ್ಚು 31 ಲಕ್ಷ ರೂ. ಬಿಡ್ ಪಡೆದುಕೊಂಡಿತ್ತು.
ಏತನ್ಮಧ್ಯೆ, ಈ ಹರಾಜಿನಲ್ಲಿ CH01DA0003 ಸಂಖ್ಯೆಯು ₹17,84,000 ರಷ್ಟು ಎರಡನೇ ಅತಿ ಹೆಚ್ಚು ಬಿಡ್ ಪಡೆದುಕೊಂಡಿತು, ನಂತರ ₹16,82,000 ಗಳಿಸಿದ CH01DA0009 ಸಂಖ್ಯೆಯು ಎರಡನೇ ಸ್ಥಾನದಲ್ಲಿದೆ. CH01DA0005 ಸಂಖ್ಯೆಯನ್ನು ₹16,51,000 ಕ್ಕೆ ಮಾರಾಟ ಮಾಡಲಾಯಿತು, CH01DA0007 ಸಂಖ್ಯೆಯನ್ನು ₹16,50,000 ಕ್ಕೆ ಪಡೆಯಲಾಯಿತು, CH01DA0002 ಸಂಖ್ಯೆಯನ್ನು ₹13,80,000 ಕ್ಕೆ ಮತ್ತು CH01DA9999 ಸಂಖ್ಯೆಯನ್ನು ₹10,25,000 ಕ್ಕೆ ಬಿಡಲಾಯಿತು.
ಚಂಡೀಗಢದ ಸಾರಿಗೆ ಇಲಾಖೆಯ ನಿರ್ದೇಶಕ ಪ್ರದ್ಯುಮನ್ ಸಿಂಗ್ ಮಾತನಾಡಿ, ಎಲ್ಲಾ ಏಳು ಸಂಖ್ಯೆಗಳು ಇದುವರೆಗಿನ ಅತಿ ಹೆಚ್ಚು ಬಿಡ್‌ಗಳನ್ನು ಪಡೆದಿವೆ ಮತ್ತು ಇದುವರೆಗಿನ ಯಾವುದೇ ಹರಾಜಿನಲ್ಲಿ 4.08 ಕೋಟಿ ರೂ.ಗಳ ದಾಖಲೆಯ ಲಾಭವನ್ನು ಗಳಿಸಿವೆ ಎಂದು ಹೇಳಿದರು.
