Home » Technology: ಐಕಾನಿಕ್ ‘ಯೆಜ್ಡಿ ರೋಡ್‌ಸ್ಟರ್‌’ ಬೈಕ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ!

Technology: ಐಕಾನಿಕ್ ‘ಯೆಜ್ಡಿ ರೋಡ್‌ಸ್ಟರ್‌’ ಬೈಕ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ!

0 comments

Technology: ಐಕಾನಿಕ್ ಯೆಜ್ಡಿ ಬೈಕ್, ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯೆಜ್ಡಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾಡೆಲ್ ‘ಯೆಜ್ಡಿ ರೋಡ್‌ಸ್ಟರ್ 2025’ ಅನ್ನು ಬಿಡುಗಡೆ ಮಾಡಿದೆ.

ಹೊಸ ಯೆಜ್ಡಿ ರೋಡ್‌ಸ್ಟರ್ 2025 ಬೈಕ್ ಹೊಸ ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. ಇದು ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ಕ್ಲಾಸಿಕ್ ಯೆಜ್ಡಿ ಬೈಕ್‌ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಈ ಬೈಕ್‌ನ ಎಂಜಿನ್ ಮತ್ತು ವಿನ್ಯಾಸದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 28.6 ಬಿಎಚ್‌ಪಿ ಪವರ್ ಮತ್ತು 30 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಗೇರ್ ಬದಲಿಸುವಾಗ ಯಾವುದೇ ಕ್ಲಿಕ್ ಮಾಡುವ ಶಬ್ದವಿಲ್ಲದೆ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ. ಬೈಕ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ, ಇದು ಉತ್ತಮ ನಿಯಂತ್ರಣ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಯೆಜ್ಡಿ ರೋಡ್‌ಸ್ಟರ್ 2025 ಬೈಕ್ 12.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇದು ಒಂದು ಪೂರ್ಣ ಟ್ಯಾಂಕ್‌ನಲ್ಲಿ ಸುಮಾರು 350 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಇದು ದೀರ್ಘ ಪ್ರಯಾಣಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.

Upcoming Cars: ಮಾರುಕಟ್ಟೆಗೆ 5 ಹೊಸ ಕಾರುಗಳ ಲಗ್ಗೆ – ಒಂದೊಂದರಲ್ಲೂ ಊಹಿಸದಂತ ಫ್ಯೂಚರ್ಸ್ !!

You may also like