Home » SCO Summit: ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್: ಉಕ್ರೇನ್ ಬಿಕ್ಕಟ್ಟು ಪರಿಹರಕ್ಕೆ ಭಾರತ-ಚೀನಾ ಪ್ರಯತ್ನ –ಪುಟಿನ್ ಪ್ರಶಂಸೆ

SCO Summit: ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್: ಉಕ್ರೇನ್ ಬಿಕ್ಕಟ್ಟು ಪರಿಹರಕ್ಕೆ ಭಾರತ-ಚೀನಾ ಪ್ರಯತ್ನ –ಪುಟಿನ್ ಪ್ರಶಂಸೆ

0 comments

SCO Summit: ಚೀನಾದ ಟಿಯಾಂಜಿನ್‌ನಲ್ಲಿ ನಡೆದ ದ್ವಿಪಕ್ಷೀಯ ಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣಿಸಿದರು. ಇಬ್ಬರೂ ನಾಯಕರು SCO ಶೃಂಗಸಭೆಗಾಗಿ ಚೀನಾದಲ್ಲಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಪುಟಿನ್ ಜತೆಗಿನ ಭೇಟಿಯ ಚಿತ್ರಗಳನ್ನು ಹಂಚಿಕೊಂಡು, ಅವರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷದಾಯಕ ಎಂದು ಹೇಳಿದ್ದರು.

“SCO ಶೃಂಗಸಭೆಯ ಸ್ಥಳದಲ್ಲಿ ನಡೆದ ಕಾರ್ಯಕಲಾಪಗಳ ನಂತರ, ಅಧ್ಯಕ್ಷ ಪುಟಿನ್ ಮತ್ತು ನಾನು ನಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಟ್ಟಿಗೆ ಪ್ರಯಾಣಿಸಿದೆವು” ಎಂದು ಪ್ರಧಾನಿ ಮೋದಿ ಅವರು X ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

“ಅವರೊಂದಿಗಿನ ಸಂಭಾಷಣೆಗಳು ಯಾವಾಗಲೂ ಒಳನೋಟವುಳ್ಳದ್ದಾಗಿರುತ್ತವೆ” ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಶೃಂಗಸಭೆಯ ಸಂದರ್ಭದಲ್ಲಿ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು. ಮೂವರು ನಾಯಕರು ಅಪರೂಪದ ಸೌಹಾರ್ದತೆಯ ಪ್ರದರ್ಶನದಲ್ಲಿ ಹಸ್ತಲಾಘವ, ಅಪ್ಪುಗೆ ಮತ್ತು ನಗುವನ್ನು ವಿನಿಮಯ ಮಾಡಿಕೊಂಡರು.

ಉಕ್ರೇನ್‌ನಲ್ಲಿನ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತದ ಪ್ರಯತ್ನಗಳನ್ನು ಪುಟಿನ್ ಶ್ಲಾಘಿಸಿದ್ದಾರೆ. “ಉಕ್ರೇನ್‌ನಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ಮಾಡಿದ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ” ಎಂದು ಟಿಯಾಂಜಿನ್‌ನಲ್ಲಿ (ಚೀನಾ) ನಡೆದ ಶಾಂಫೈ ಸಹಕಾರ ಮಂಡಳಿ (SCO) ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. “ಉಕ್ರೇನ್ ಅನ್ನು NATOR ಸೆಳೆಯಲು ನಡೆದ ಪಾಶ್ಚಿಮಾತ್ಯ ಪ್ರಯತ್ನಗಳು ಉಕ್ರೇನಿಯನ್ ಬಿಕ್ಕಟ್ಟಿಗೆ ಪ್ರಮುಖ ಕಾರಣ” ಎಂದು ಪುಟಿನ್ ಹೇಳಿದ್ದಾರೆ.

Dharmasthala: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌; ಬಿವೈವಿ

You may also like