Delhi: ಹೆಚ್ಚಿನ ಟ್ರಾಫಿಕ್ ಪೊಲೀಸರುಗಳು ಟ್ರಾಫಿಕ್ ರೂಲ್ಸ್ ಫಾಲೋ ಮಾಡದವರಿಗೆ ದಂಡವನ್ನು ವಿಧಿಸದೆ ಅವರ ಬಳಿ ಹೆಚ್ಚುವರಿ ಹಣ ಅಥವಾ ಲಂಚವನ್ನು ಪಡೆದು ಕಳುಹಿಸಿಬಿಡುತ್ತಾರೆ. ಇದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಮ್ಮ ಭಾರತೀಯ ಪ್ರಜೆಗಳೊಂದಿಗೆ ನಮ್ಮ ಪೊಲೀಸರು ಈ ರೀತಿ ವ್ಯವಹರಿಸುವುದು ತಪ್ಪು. ಆದರೆ ಇನ್ನೊಂದೆಡೆ ಟ್ರಾಫಿಕ್ ಪೊಲೀಸರು ವಿದೇಶಿಗರಿಂದಲೂ ಹಣ ಪಡೆದು ಭಾರತೀಯರ ಮಾನ ಕಳೆದಿದ್ದಾರೆ.
ಹೌದು, ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಜಪಾನ್ ಮೂಲದ ಪ್ರವಾಸಿಗರು ದ್ವಿಚಕ್ರ ವಾಹನದಲ್ಲಿ ಪಯಣಿಸುತ್ತಿದ್ದರು. ಇವರಲ್ಲಿ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ, ಹೀಗಾಗಿ ಇವರನ್ನು ಹಿಡಿದ ಗುರುಗ್ರಾಮದ ಟ್ರಾಫಿಕ್ ಪೊಲೀಸರು ಹಿಂಬದಿ ಸವಾರನಿಂದ 1,000 ಲಂಚ ಕೇಳಿದ್ದಾರೆ. ಸ್ಕೂಟರ್ ಅನ್ನು ಹೆಲ್ಮೆಟ್ ಧರಿಸಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು, ಆದರೆ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಪ್ರವಾಸಿಗರಿಗೆ ದಂಡವಾಗಿ 1,000 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳುವುದನ್ನು ಕೇಳಬಹುದು. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಅಲ್ಲದೆ ಅಧಿಕಾರಿ ನೀವು ಇಲ್ಲಿ ಅಥವಾ ನ್ಯಾಯಾಲಯದಲ್ಲಿ ಹಣ ಪಾವತಿಸಬಹುದಾ ಎಂದು ಕೇಳುತ್ತಾ ನಗದು ರೂಪದಲ್ಲಿ ಹಣ ಪಾವತಿ ಮಾಡುವಂತೆ ಕೇಳುತ್ತಾರೆ. ಪ್ರವಾಸಿಗರಲ್ಲಿ ಒಬ್ಬರು ನಾನು ವೀಸಾ ಅಥವಾ ಸ್ಪರ್ಶ ಕಾರ್ಡ್ ಬಳಸಬಹುದೇ? ಎಂದು ಕೇಳುತ್ತಾರೆ. ಅದಕ್ಕೆ ಅಧಿಕಾರಿ ವೀಸಾ ಟಚ್ ಇಲ್ಲ ಎಂದು ಹೇಳುತ್ತಾರೆ. ನಂತರ ಪ್ರವಾಸಿ ಎರಡು 500 ರೂಪಾಯಿಯ ನೋಟುಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ.ಆದರೆ ಪೊಲೀಸರು ಚಲನ್ ನೀಡದೇ ಆ ಹಣವನ್ನು ಸ್ವೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ.
https://x.com/sunny_panday_/status/1962398181096141138?t=gqjAU-QY5WZ9yO_u2czD5g&s=19
Kitchen Tips: ಕಿಚನ್ ಸಿಂಕ್ ನಿಂದ ವಾಸನೆ ಬರುತ್ತಿದ್ರೆ ಜಸ್ಟ್ ಹೀಗೆ ಮಾಡಿ ಸಿಂಕ್ ಕ್ಲೀನ್ ಆಗಿ ಪರಿಮಳ ಬರುತ್ತೆ!
