Home » Ship: ಮೊದಲ ಬಾರಿಗೆ ನೀರಿಗಿಳಿಯುತ್ತಿದ್ದಂತೆ 15 ನಿಮಿಷದಲ್ಲೇ ಮುಳುಗಿದ ಐಷಾರಾಮಿ ಹಡಗು !!

Ship: ಮೊದಲ ಬಾರಿಗೆ ನೀರಿಗಿಳಿಯುತ್ತಿದ್ದಂತೆ 15 ನಿಮಿಷದಲ್ಲೇ ಮುಳುಗಿದ ಐಷಾರಾಮಿ ಹಡಗು !!

0 comments

Ship: ಆಗ ತಾನೇ ಪ್ರಯಾಣ ಆರಂಭಿಸಿದ ಸುಮಾರು ಎಂಟು ಕೋಟಿ ಅಧಿಕ ಮೌಲ್ಯದ ಐಷಾರಾಮಿ ಹಡಗೊಂದು ಮುಳುಗಿರುವ ಅಚ್ಚರಿ ಘಟನೆ ನಡೆದಿದೆ.

ಹೌದು, ಟರ್ಕಿಯಲ್ಲಿ ಈ ದುರಂತ ನಡೆದಿದೆ. ಡೋಲ್ಸ್ ವೆಂಟೊ ಹೆಸರಿನ ಈ ವಿಹಾರಿ ನೌಕೆಯು ಸರಿಸುಮಾರು 85 ಅಡಿ ಉದ್ದವಿತ್ತು. ಇದು ಮಂಗಳವಾರ ಉತ್ತರ ಟರ್ಕಿಯ ಎರೆಗ್ಲಿ ಜಿಲ್ಲೆಯ ಜೊಂಗುಲ್ಡಕ್ ಕರಾವಳಿಯಲ್ಲಿ ತನ್ನ ಚೊಚ್ಚಲ ಪ್ರಯಾಣ ಆರಂಭಿಸಿದ 15 ನಿಮಿಷದಲ್ಲಿ ಮುಳುಗಡೆಯಾಗಿದೆ.

ಇದನ್ನೂ ಓದಿ:Odanadi: ಒಡನಾಡಿ ಸೇವಾ ಸಂಸ್ಥೆಗೆ ವಿದೇಶಿ ದೇಣಿಗೆ ಬರುವುದು ಸತ್ಯ: ಈ ಸಂಬಂಧ ಇಡಿ ನಮಗೆ ನೋಟಿಸ್‌ ನೀಡಿಲ್ಲ – ಸಂಸ್ಥಾಪಕ ಸ್ಟ್ಯಾನ್ಲಿ ಸ್ಪಷ್ಟನೆ

ಜೊಂಗುಲ್ಡಕ್ ಕರಾವಳಿಯ ನೀರಿನಲ್ಲಿ ಹಡಗು ನಿಧಾನವಾಗಿ ಮುಳುಗುತ್ತಿದ್ದಂತೆ, ಹಡಗಿ ಮಾಲೀಕ ಮತ್ತು ಇತರರು ಯಾವುದೇ ಹಾನಿಯಾಗದೆ ಕ್ರಮೇಣ ಈಜುತ್ತಾ ದಡ ಸೇರಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಡೋಲ್ಸ್ ವೆಂಟೊದ ತಾಂತ್ರಿಕ ತಪಾಸಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಹಡಗುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

You may also like