Kitchen Hacks: ಮಹಿಳೆಯೊಬ್ಬರು ತಮ್ಮ ಇನ್ ಸ್ಟ್ರಾಗ್ರಾಮ್‌ನಲ್ಲಿ ಮಿಕ್ಸರ್ ಜಾರ್ ಕೆಳಭಾಗ ಸ್ವಚ್ಛಗೊಳಿಸುವ ಸುಲಭ ವಿಧಾನ( Kitchen Hacks)ಹೇಗೆ ಎಂಬುವುದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗಿದ್ದು, ನೀವು ಕೂಡ ಇದೇ ಟಿಪ್ಸ್ ಫಾಲೋ ಮಾಡಬಹುದು.
ಹಲವರು ಮಿಕ್ಸರ್ ಜಾರ್ ಮೇಲ್ಭಾಗವನ್ನು ತೊಳೆಯುತ್ತಾರೆ. ಆದರೆ ಕೆಳ ಭಾಗವನ್ನು ತೊಳೆಯುವುದನ್ನು ಮರೆಯುತ್ತಾರೆ. ಏಕೆಂದರೆ ಅದನ್ನು ಸ್ವಚ್ಛಗೊಳಿಸಲು ತುಂಬಾ ಕಷ್ಟ. ಆದ್ದರಿಂದ ಇದನ್ನು ಹೆಚ್ಚಾಗಿ ಕಡೆಗಣಿಸುತ್ತಾರೆ. ಹೀಗಾಗಿ ಅನೇಕ ಮನೆಗಳಲ್ಲಿ ಮಿಕ್ಸರ್ ಜಾರ್‌ನ ಕೆಳಭಾಗ ಮಾತ್ರ ಹೆಚ್ಚಾಗಿ ಕೊಳಕಾಗಿರುವುದನ್ನು ನೀವು ಗಮನಿಸಬಹುದು. ಈ ಮಿಕ್ಸರ್ ಜಾರ್ ಸ್ವಚ್ಛಗೊಳಿಸಲು ಸುಲಭವಾದ ಟಿಪ್ಸ್ ಅನ್ನು ಮಹಿಳೆಯೊಬ್ಬರು ತಮ್ಮ ಇನ್ ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಹಿಳೆ, “ಮೊದಲು, ಬ್ಲೆಂಡರ್ ಜಾರ್‌ನ ಕೆಳಭಾಗದಲ್ಲಿ 1 ಚಮಚ ಅಡುಗೆ ಸೋಡಾವನ್ನು ಹಾಕಿ, ಅದರ ಮೇಲೆ ವಿನೆಗರ್ ಸುರಿಯುತ್ತಾರೆ. ನಂತರ ಈ ಮಿಶ್ರಣವನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ಬಳಿಕ ಅದರಲ್ಲಿ ಸ್ವಲ್ಪ ಡಿಶ್ ಸೋಪ್ ಲಿಕ್ವೆಡ್ ಅನ್ನು ಸುರಿಯುತ್ತಾರೆ.
ಕೊನೆಗೆ ಫೋರ್ಕ್ ಬಳಸಿ ಟಿಶ್ಯೂ ಪೇಪರ್ ಅನ್ನು ನಾಲ್ಕು ತುಂಡುಗಳಾಗಿ ಪೋಲ್ಡ್ ಮಾಡಿ ತುದಿಯಲ್ಲಿ ಹಿಸುಕು ಹಾಕಿ. ಟಿಶ್ಯೂ ಪೇಪರ್ ಮೇಲೆ ಕೊಳೆ ಅಂಟಿಕೊಳ್ಳುವಂತೆ ಜಾರ್ ಸುತ್ತಲೂ ಉಜ್ಜುತ್ತಾರೆ.
ಉಳಿದ ಕೊಳೆಯನ್ನು ಬ್ರಷ್ ನಿಂದ ಕೊಳೆ ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ. ನಂತರ ನೀರಿನಿಂದ ತೊಳೆಯುತ್ತಾರೆ. ಆಗ ಹೊಸ ಜಾರ್ನಂತೆ ಹೊಳೆಯುತ್ತದೆ.
