Home » Blood Moon Eclipse: ರಕ್ತ ಚಂದ್ರ ಗ್ರಹಣ ಪ್ರಯುಕ್ತ ನಾಳೆ ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೆಗೆ ನಿರಂತರ ಜಲಾಭಿಷೇಕ

Blood Moon Eclipse: ರಕ್ತ ಚಂದ್ರ ಗ್ರಹಣ ಪ್ರಯುಕ್ತ ನಾಳೆ ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೆಗೆ ನಿರಂತರ ಜಲಾಭಿಷೇಕ

0 comments

Blood Moon Eclipse: ಭಾನುವಾರ (ಸೆ.6) ನಡೆಯಲಿರುವ ರಕ್ತ ಚಂದ್ರ ಗ್ರಹಣ (Blood Moon Eclipse) ಹಿನ್ನೆಲೆ ಶೃಂಗೇರಿ ಶಾರದಾಂಭೆ (Sringeri Sharadamba Temple), ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನ (Horanadu Annapoorneshwari Temple) ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ನಿರಂತರ ಜಲಾಭಿಷೇಕ ನೆರವೇರಲಿದೆ.

ಶೃಂಗೇರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.

ಇದನ್ನೂ ಓದಿ;SIIMA 2025: ಅತ್ಯುತ್ತಮ ನಟ ಸೈಮಾ ಅವಾರ್ಡ್ ಗೆದ್ದ ಸುದೀಪ್, ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ : ಉಪೇಂದ್ರ ಅತ್ಯುತ್ತಮ ನಿರ್ದೇಶಕ

ಕಿಗ್ಗಾದ ಋಷ್ಯಶೃಂಗೇಶ್ವರ ಹಾಗೂ ಕಳಸದ ಕಳಸೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನಡೆಯಲಿದೆ. ಪ್ರಸಾದ ಇರುವುದಿಲ್ಲ. ಗ್ರಹಣದ ವೇಳೆ ಈಶ್ವರನಿಗೆ ನಿರಂತರ ಜಲಾಭಿಷೇಕ ನಡೆಯಲಿದೆ. ನಾಲ್ಕು ಪ್ರಮುಖ ದೇವಾಲಯದಲ್ಲೂ ಗ್ರಹಣ ಆರಂಭದಿಂದ ಅಂತ್ಯದವರೆಗೆ ನಿರಂತರ ಜಲಾಭಿಷೇಕ ನಡೆಯಲಿದೆ.

You may also like