9
Su From So: ‘ಸು ಫ್ರಮ್ ಸೋ’ (Su From So) ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪನ್ನು ಮೂಡಿಸಿದ ಒಂದು ಅದ್ಭುತ ಸಿನಿಮಾ. ಹಲವು ಸಿನಿಮಾಗಳದ ಕಲೆಯನ್ನು ಮುರಿದು, ಇಡೀ ಕನ್ನಡಿಗರನ್ನು ನಗೆಯ ಕಡಲಲ್ಲಿ ತೇಲಿಸಿದ ಈ ಸಿನಿಮಾ ಇದೀಗ OTTಗೆ ಲಗ್ಗೆ ಇಡಲು ರೆಡಿಯಾಗಿದೆ..
ಹೌದು, ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಭರ್ಜರಿ ಹಿಟ್ ಆಗಿರುವ ಸು ಫ್ರಂ ಸೊ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಜನಪ್ರಿಯ ಜಿಯೊ ಹಾಟ್‌ಸ್ಟಾರ್ ಒಟಿಟಿಲ್ಲಿ ‘ಸು ಫ್ರಂ ಸೊ’ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
