Home » Lunar eclipse: ಚಂದ್ರಗ್ರಹಣ ಬರಿ ಕಣ್ಣಿನಲ್ಲಿ ನೋಡಬಹುದೇ? ಭೌತವಿಜ್ಞಾನಿ ಹೇಳಿದ್ದೇನು?!

Lunar eclipse: ಚಂದ್ರಗ್ರಹಣ ಬರಿ ಕಣ್ಣಿನಲ್ಲಿ ನೋಡಬಹುದೇ? ಭೌತವಿಜ್ಞಾನಿ ಹೇಳಿದ್ದೇನು?!

0 comments

Lunar eclipse: ಬರಿಯ ಕಣ್ಣಿನಲ್ಲಿ ಚಂದ್ರಗ್ರಹಣವನ್ನು ನೋಡಬಹುದಾ?ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಹಿರಿಯ ಭೌತಶಾಸ್ತ್ರಜ್ಞ ಡಾ. ಎಪಿ ಭಟ್ ಪ್ರಕಾರ,

ನಸುಗೆಂಪು ಚಂದ್ರ (Lunar eclipse) ಕಣ್ಣು, ಮನಸ್ಸಿಗೆ ಹಿತ ಕೊಡುತ್ತಾನೆ. ಬರಿಯ ಕಣ್ಣಿನಲ್ಲಿ ನೋಡಿ ಎಂಜಾಯ್ ಮಾಡಿ ಎಂದು ಹೇಳಿದ್ದಾರೆ.

ಇದು ಪ್ರಕೃತಿಯ ಸುಂದರ ವಿದ್ಯಮಾನ, ನೋಡಿ ಆನಂದಿಸಬೇಕು. ಜನರು ಭಯಭೀತರಾಗುವುದು ಬೇಡ. ಪ್ರಕೃತಿಯಲ್ಲಿ ಹಲವಾರು ಏರಿಳಿತ ಇದ್ದೇ ಇರುತ್ತದೆ. ಹುಣ್ಣಿಮೆ ಅಮಾವಾಸ್ಯೆ ವೇಳೆ ಸಮುದ್ರದ ಅಲೆಯಲ್ಲಿ ವ್ಯತ್ಯಾಸ ಕಾಣುತ್ತದೆ. ಹುಣ್ಣಿಮೆಯನ್ನು ನಮ್ಮಲ್ಲಿ ಪವಿತ್ರ ದಿವಸ ಎನ್ನುತ್ತೇವೆ. ಹಾಲು ಬೆಳದಿಂಗಳಲ್ಲಿ ಕುಳಿತಾಗ ಮನಸ್ಸಿಗೆ ರಿಲ್ಯಾಕ್ಸ್‌ ಸಿಗುತ್ತದೆ. ಮನಸ್ಸಿಗೆ ಮುದ ಕೊಡುವಂತಹ ಕಾಲ. ಅದೇ ಪವಿತ್ರವಾದ ದಿವಸ ಎಂದು ತಿಳಿಸಿದ್ದಾರೆ.

ಭೂಮಿಯವರಿಗೆ ನಾಳೆ ಚಂದ್ರ ಖುಷಿ ಕೊಡುತ್ತಿದ್ದಾನೆ. ಇದರಿಂದ ಅವರಿಗೆ ಇವರಿಗೆ ತೊಂದರೆ ಅಂತ ಹೆದರ ಬೇಕಾಗಿಲ್ಲ. ಗ್ರಹಣ ಕಾಲದಲ್ಲಿ ಹೊಸದೇನು ಆಗುವುದಿಲ್ಲ. ಇದು ನೆರಳು ಬೆಳಕಿನ ಆಟ ಅಂತ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಇದರಲ್ಲಿ ಹೊಸದೇನು ಆಗುವುದಿಲ್ಲ. ಎಲ್ಲರೂ ನೋಡಿ ಆನಂದಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:Mahindra : GST ಕಡಿತ ಬೆನ್ನಲ್ಲೇ ಮಹಿಂದ್ರಾ ಥಾರ್ ಬೆಲೆಯಲ್ಲಿ ಭಾರಿ ಇಳಿಕೆ – ಹೊಸ ಬೆಲೆ ಸೆ. 22 ರಿಂದಲ್ಲ 6 ರಿಂದಲೇ ಜಾರಿ !!

ಪೂಜೆ, ಜಪ-ತಪ ಮಾಡುವವರು ಮಾಡಿ. ಮನಸ್ಸಿನ ಏಕಾಗ್ರತೆಗೆ ಒಳ್ಳೆಯ ಸಮಯ. ನಮಗೆ ಬೇಕು ಅಂದಾಗ ಸಿಗಲ್ಲ. ಪ್ರಕೃತಿ ವಿದ್ಯಮಾನವನ್ನು ಸಂಭ್ರಮಿಸಿ ಎಂದು ಹೇಳಿದ್ದಾರೆ.

You may also like