Home » Purchase Deed Registration: ಮನೆ, ಫ್ಲ್ಯಾಟ್‌, ವಿಲ್ಲಾ ಖರೀದಿ ಮಾಡುವವರಿಗೆ ಸಿಹಿ ಸುದ್ದಿ, ಕ್ರಯಪತ್ರ ನೋಂದಣಿ ಮೇಳ ಆಯೋಜನೆ

Purchase Deed Registration: ಮನೆ, ಫ್ಲ್ಯಾಟ್‌, ವಿಲ್ಲಾ ಖರೀದಿ ಮಾಡುವವರಿಗೆ ಸಿಹಿ ಸುದ್ದಿ, ಕ್ರಯಪತ್ರ ನೋಂದಣಿ ಮೇಳ ಆಯೋಜನೆ

0 comments

Purchase Deed Registration: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಫ್ಲ್ಯಾಟ್ ಮೇಳದ ಮಾದರಿಯಲ್ಲೇ ಇದೇ ಮೊದಲ ಬಾರಿಗೆ ಕ್ರಯಪತ್ರ ನೋಂದಣಿ ಮೇಳವನ್ನು ಕೂಡ ಆಯೋಜಿಸಲಿದೆ. ಕ್ರಯಪತ್ರ ನೋಂದಣಿಗಾಗಿ ತಿಂಗಳುಗಟ್ಟಲೆ ಅಲೆದಾಡಬೇಕಿತ್ತು. ದಾಖಲೆಗಳನ್ನು ಒದಗಿಸುವುದು ಕಷ್ಟ ಸಾಧ್ಯವಾಗಿತ್ತು. ಅಗತ್ಯ ದಾಖಲೆ ಸಲ್ಲಿಸಿದರೂ ಕೆಲವೊಮ್ಮೆ ಅಧಿಕಾರಿಗಳು ಸಬೂಬು ಹೇಳಿ ಸತಾಯಿಸುತ್ತಿದ್ದರು. ಹೀಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಕ್ಟೋಬರ್ 3ರಿಂದ 16ರವರೆಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ಸೇಲ್ ಡೀಡ್ ಮೇಳ(ಕ್ರಯಪತ್ರ ನೋಂದಣಿ ಮೇಳ) ಆಯೋಜಿಸುತ್ತಿದೆ.

ಫ್ಲ್ಯಾಟ್, ವಿಲ್ಲಾ ಖರೀದಿಸಿದವರು, ಉಳಿದ ಹಣ ಪಾವತಿಸದ, ಅಗತ್ಯ ದಾಖಲೆಗಳನ್ನು ಸಲ್ಲಿಸದ ಖರೀದಿದಾರರು ಸೆಪ್ಟೆಂಬರ್ 30ರೊಳಗೆ ಪೂರ್ಣ ಹಣ ಪಾವತಿಸಿ ದಾಖಲೆ ಸಲ್ಲಿಸಿದರೆ ಅಕ್ಟೋಬರ್ ನಲ್ಲಿ ಸೇಲ್ ಡೀಡ್ ನೊಂದಣಿ ಕ್ರಯಪತ್ರ ಮಾಡಿಕೊಡಲಾಗುವುದು.

ಇದನ್ನೂ ಓದಿ:Maharashtra: ಮಹಾರಾಷ್ಟ್ರದಾದ್ಯಂತ ಗಣಪತಿ ವಿಗ್ರಹ ವಿಸರ್ಜನೆ ವೇಳೆ 9 ಜನರು ಮುಳುಗಿ ಸಾವು; 12 ಮಂದಿ ನಾಪತ್ತೆ

ಮೇಳದಲ್ಲಿ ಸಬ್ ರಿಜಿಸ್ಟ್ರಾರ್ ಜೊತೆಗೆ ಬಿಡಿಎ ಅಧಿಕಾರಿಗಳು ಹಾಜರಿರಲಿದ್ದು, ದಾಖಲೆಗಳಿಗೆ ಸಂಬಂಧಿಸಿದ ಗೊಂದಲವನ್ನು ಸ್ಥಳದಲ್ಲೇ ಪರಿಹರಿಸಿ ಕ್ರಯಪತ್ರ ನೋಂದಣಿ ಮಾಡಿಕೊಡಲಾಗುವುದು. ಆಧಾರ್ ಕಾರ್ಡ್ ಪಾನ್ ಕಾರ್ಡ್. ಸ್ವಯಂ ಪ್ರಮಾಣ ಪತ್ರ, ಬ್ಯಾಂಕ್ ಎನ್‌ಒಸಿ, ದೃಢೀಕೃತ ಪ್ರತಿ, ಅಗತ್ಯವಿದ್ದಲ್ಲಿ ಫಾರಂ 16 ಬಿ ಮತ್ತು 26 ಕ್ಯೂಬಿ, ಪಾಸ್ ಪೋರ್ಟ್ ಅಳತೆಯ ಮೂರು ಭಾವಚಿತ್ರ ದಾಖಲೆಗಳು ಬೇಕಿದೆ.

You may also like