Home » Mangaluru: ಮಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: ಅರೋಮಾಝೆನ್‌ ಸುಗಂಧ ದ್ರವ್ಯ ಫ್ಯಾಕ್ಟರಿಗೆ ಬೆಂಕಿ

Mangaluru: ಮಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: ಅರೋಮಾಝೆನ್‌ ಸುಗಂಧ ದ್ರವ್ಯ ಫ್ಯಾಕ್ಟರಿಗೆ ಬೆಂಕಿ

0 comments

Mangaluru: ಮಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ ನಡೆದಿದೆ. ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ಅಗ್ನಿ ಅವಘಡ ನಡೆದಿದ್ದು, ಬೆಂಕಿಯ ಅಲೆಗೆ ಅಮೆಝಾನ್‌ ಸುಗಂಧ ದ್ರವ್ಯ ಫ್ಯಾಕ್ಟರಿ ಹೊತ್ತಿ ಉರಿದಿದೆ.

ಘಟನೆಯ ಕುರಿತು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಸೋಪ್‌ ಹಾಗೂ ಪರ್ಫ್ಯೂಮ್‌ಗೆ ಉಪಯೋಗಿಸುವ ಲಿಕ್ವೀಡ್‌ ತಯಾರಿಕೆ ಮಾಡುವ ಫ್ಯಾಕ್ಟರಿ ಇದಾಗಿತ್ತು. ಇಂದು ಮುಂಜಾನೆ ಫ್ಯಾಕ್ಟರಿಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿದೆ. ಇದನ್ನು ಗಮನಿಸಿದ ಸಂಸ್ಥೆಯ ಸಿಬ್ಬಂದಿಗಳು ಅಗ್ನಿಶಾಮಕ ದಳದವರಿಗೆ ಕೂಡಲೇ ಕರೆ ಮಾಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಬಂದಿದ್ದು, ನಂತರ ಬೆಂಕಿಯನ್ನು ನಂದಿಸಲಾಗಿದೆ.

ಇದನ್ನೂ ಓದಿ:Donald Trump: ‘ನನ್ನ ದೋಸ್ತ್.. ಮೋದಿ ಜೊತೆ ಮಾತನಾಡಲು ಕಾಯುತ್ತಿದ್ದೇನೆ’ – ಡೊನಾಲ್ಡ್ ಟ್ರಂಪ್ ಹೇಳಿಕೆ

ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ. ತನಿಖೆ ಮೂಲಕ ವಿಷಯ ತಿಳಿದು ಬರಬೇಕಿದೆ. ಮಾಹಿತಿ ಪ್ರಕಾರ ಅಂದಾಜು ನಾಲ್ಕು ಕೋಟಿ ನಷ್ಟ ಉಂಟಾಗಿರಬಹುದು ಎನ್ನಲಾಗಿದೆ.

You may also like