Home » OC Exemption: ಸಿಹಿ ಸುದ್ದಿ, 2 ಅಂತಸ್ತಿನ ಕಟ್ಟಡಗಳಿಗೆ ʼಓಸಿ ವಿನಾಯಿತಿʼ-ರಾಜ್ಯ ಸರಕಾರ ಆದೇಶ

OC Exemption: ಸಿಹಿ ಸುದ್ದಿ, 2 ಅಂತಸ್ತಿನ ಕಟ್ಟಡಗಳಿಗೆ ʼಓಸಿ ವಿನಾಯಿತಿʼ-ರಾಜ್ಯ ಸರಕಾರ ಆದೇಶ

0 comments
Shakti scheme

OC Exemption: ಬೆಂಗಳೂರಿಗೆ ಸಿಹಿ ಸುದ್ದಿಯೊಂದು ದೊರಕಿದ್ದು, ಇನ್ನು ಮುಂದೆ ಬೆಂಗಳೂರು ವ್ಯಾಪ್ತಿಯಲ್ಲಿ 1,200 ಚದರಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಸ್‌ ಮತ್ತು 2 ಅಂತಸ್ತಿನ ಸ್ವಾಧೀನಾನುಭವ ಪತ್ರದಿಂದ (ಓಸಿ) ವಿನಾಯಿತಿ ನೀಡಿ ರಾಜ್ಯ ಸರಕಾರ ಮಂಗಳವಾರ ಆದೇಶ ನೀಡಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ -2024 ರ ಅಧ್ಯಾಯ 7 ರ ನಿಬಂಧನೆಗಳ ಅನ್ವಯ ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಕಾರ್ಯಗತಗೊಳಿಸಲು ಲಭ್ಯವಿರುವ ಕಾರ್ಯಪಡೆಯೊಂದಿಗೆ ದೃಢವಾದ ಆಡಳಿತ ರಚನೆಯನ್ನು ವಿನ್ಯಾಸಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀಕನ ಕಾರ್ಯದರ್ಶಿ (ಜಿಬಿಎ, ಬೆಂನಪಾ-1) ಎನ್‌.ಕೆ.ಲಕ್ಷ್ಮೇಸಾಗರ್‌ ಅವರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7)ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರದನ್ವಯ, 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ, ನಕ್ಷೆ ಮಂಜೂರಾತಿ ಪಡೆದು ನಿರ್ಮಿಸುವ ನೆಲ + 2 ಅಂತಸ್ತು ಅಥವಾ Stilt + 3 ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (Occupancy certificate) ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶಿಸಿದೆ.

ಇದನ್ನೂ ಓದಿ:Ullala: ಉಳ್ಳಾಲ ರಾಣಿ ಅಬ್ಬಕ್ಕ ಅರಮನೆ, ಕೋಟೆ ಕೊತ್ತಲ ಸರ್ವನಾಶ: ಉಪನ್ಯಾಸಕ, ಸಾಹಿತಿ, ಸಂಶೋಧಕ ಬಿ.ಎ.ಲೋಕಯ್ಯ ಶಿಶಿಲ ವಿಷಾದ!

ಗ್ರೇಟ‌ರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಅಧ್ಯಾಯ 7ರ ನಿಬಂಧನೆಗಳನ್ವಯ ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗಳನ್ನು ಕಾರ್ಯಗತಗೊಳಿಸಲು ಲಭ್ಯವಿರುವ ಕಾರ್ಯಪಡೆಯೊಂದಿಗೆ ದೃಢವಾದ ಆಡಳಿತ ರಚನೆಯನ್ನು ವಿನ್ಯಾಸಗೊಳಿಸುವಂತೆ ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರವರಿಗೆ ನಿರ್ದೇಶಿಸಿದೆ.

You may also like