Home » Bangalore: ಬೈಕ್‌ ಸವಾರ vs ವಿಂಗ್‌ಕಮಾಂಡರ್‌ ಕೇಸ್‌: ರಾಜಿಯೊಂದಿಗೆ ಮುಕ್ತಾಯ, FIR ರದ್ದು

Bangalore: ಬೈಕ್‌ ಸವಾರ vs ವಿಂಗ್‌ಕಮಾಂಡರ್‌ ಕೇಸ್‌: ರಾಜಿಯೊಂದಿಗೆ ಮುಕ್ತಾಯ, FIR ರದ್ದು

0 comments

Bangalore: ಬೈಕ್‌ ಸವಾರನ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಕನ್ನಡ ಭಾಷಾ ವಿಚಾರ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿದ್ದು, ಇದು ದೇಶದಾದ್ಯಂತ ಸುದ್ದಿಯಾಗಿತ್ತು. ಪಶ್ಚಿಮ ಬಂಗಾಳ ಮೂಲದ ಭಾರತೀಯ ವಾಯುಪಡೆಯ ಅಧಿಕಾರಿ ಶಿಲಾದಿತ್ಯ ಬೋಸ್‌ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು, ಈ ಕೊಲೆ ಯತ್ನ ಪ್ರಕರಣವನ್ನು ಹೈಕೋರ್ಟ್‌ ರದ್ದುಮಾಡಿದೆ.

ಇದನ್ನೂ ಓದಿ;Ragini MMS Returns ನಟಿ ಕರೀಷ್ಮಾ ಚಲಿಸುವ ರೈಲಿನಿಂದ ಹಾರಿ, ಆಸ್ಪತ್ರೆಗೆ ದಾಖಲು

ಇದರ ಜೊತೆಗೆ ಶಿಲಾದಿತ್ಯ ಬೋಸ್‌ ಪತ್ನಿ ಮಧುಮಿತಾ ದತ್ತಾ ನೀಡಿದ ದೂರನ್ನು ಆಧರಿಸಿ ವಿಕಾಸ್‌ ಕುಮಾರ್‌ ಎಂಬಾತನ ವಿರುದ್ಧ ದಾಖಲು ಮಾಡಲಾಗಿದ್ದ ಎಫ್‌ಐಆರ್‌ ಕೂಡಾ ಹೈಕೋರ್ಟ್‌ ರದ್ದು ಮಾಡಿದೆ. ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರ ಪೀಠ ಈ ಆದೇಶ ಮಾಡಿದೆ.

You may also like