Home » CM Siddaramiah : ಕ್ರಿಶ್ಚಿಯನ್ ಗೆ ದಲಿತ, ಕುರುಬ ಎಂಬ ಹಿಂದೂ ಪಂಗಡಗಳ ಕಾಲಂ ಯಾಕೆ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ

CM Siddaramiah : ಕ್ರಿಶ್ಚಿಯನ್ ಗೆ ದಲಿತ, ಕುರುಬ ಎಂಬ ಹಿಂದೂ ಪಂಗಡಗಳ ಕಾಲಂ ಯಾಕೆ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ

0 comments

CM Siddaramiah : ಜಾತಿಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದ್ದು ಈ ಸಂದರ್ಭದಲ್ಲಿ ಕ್ರಿಶ್ಚಿಯನ್ಗೆ ದಲಿತ, ಕುರುಬ ಸೇರಿದಂತೆ ಇತರ ಜಾತಿಗಳ ಹೆಸರಿನಲ್ಲಿ ಕಾಲಂ ಯಾಕೆ ಎಂಬ ಪ್ರಶ್ನೆ ಎದುರಾಗಿದೆ ಈ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಕ್ರಿಶ್ಚಿಯನ್ ರೆಡ್ಡಿ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ದಲಿತ, ಕ್ರಿಶ್ಚಿಯನ್ ಕುರುಬ ಎಂದು ಹಿಂದೂ ಪಂಗಡಗಳನ್ನು ಕ್ರಿಶ್ಚಿಯನ್ ಪಂಗಡಳ ಸಾಲಿನಲ್ಲಿ ಸೇರಿಸಲಾಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕ್ರಿಶ್ಚಿಯನ್ ರಲ್ಲಿ ಯಾವಾಗ ಬ್ರಾಹ್ಮಣ, ದಲಿತ ಜಾತಿ ಎಲ್ಲಾ ಬಂತು ಎಂದು ಹಲವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಿಎಂ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದ್ದಾರೆ.

ಈ ಕುರಿತಾಗಿ ಮಾತನಾಡಿದ ಮುಖ್ಯಮಂತ್ರಿಗಳು “ಕ್ರಿಶ್ಚಿಯನ್ ದಲಿತರು, ಕುರುಬರೂ ನಾಗರಿಕರೇ. ಮತಾಂತರ ಆಗಿರುವ ಕಾರಣಕ್ಕೆ ಅವರಿಗೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಬಾರದು. ಆ ಕಾರಣಕ್ಕೆ ಪ್ರತ್ಯೇಕ ಕಾಲಂ ಸೇರಿಸಲಾಗಿದೆ ಎಂದಿದ್ದಾರೆ. ಇನ್ನು, ಲಿಂಗಾಯತ ಪ್ರತ್ಯೇಕ ಧರ್ಮದ ಕಾಲಂ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು ವೀರಶೈವ ಧರ್ಮ ಅಥವಾ ಲಿಂಗಾಯತ ಧರ್ಮ ಎಂದು ಏನು ಬೇಕಾದರೂ ಬರೆಸಲಿ. ನಮಗೆ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಗೊತ್ತಾಗಬೇಕು” ಎಂದಿದ್ದಾರೆ.

You may also like