Home » Actress Disha Patani: ನಟಿ ದಿಶಾ ಪಟಾನಿ ಮನೆ ಹೊರಗಡೆ ಗುಂಡಿನ ದಾಳಿ

Actress Disha Patani: ನಟಿ ದಿಶಾ ಪಟಾನಿ ಮನೆ ಹೊರಗಡೆ ಗುಂಡಿನ ದಾಳಿ

0 comments

Actress Disha Patani: ಇಂದು ಬೆಳ್ಳಂಬೆಳಗ್ಗೆ ಬಾಲಿವುಡ್‌ ನಟಿ ದಿಶಾ ಪಟಾನಿ ಮನೆ ಹೊರಭಾಗದಲ್ಲಿ ಗುಂಡಿನ ದಾಳಿಯಾಗಿದೆ. ಎರಡು ಸುತ್ತು ಗುಂಡನ್ನು ಹಾರಿಸಿದ ಘಟನೆ ನಡೆದಿದೆ.

ದಿಶಾ ಪಟಾನಿ ಮನೆ ಉತ್ತರ ಪ್ರದೇಶದಲ್ಲಿದ್ದು, ಬೆಳಗಿನ ಸಮಯ 4.30 ರ ಸುಮಾರಿಗೆ ಗುಂಡಿನ ಶಬ್ದ ಕೇಳಿ ಬಂದಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನಟಿ ದಿಶಾ ಪಟಾನಿ ಮನೆ ಹೊರಗಡೆ ನಡೆದ ಗುಂಡಿನ ದಾಳಿ ಹೊಣೆಯನ್ನು ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಹಾಗೂ ರೋಹಿತ್‌ ಗೋದರಾ ಹೊತ್ತುಕೊಂಡಿದ್ದಾರೆ. ಲಾರೆನ್ಸ್‌ ಬಿಷ್ಣೋಯ್‌ ಜೊತೆ ಗುರುತಿಸಿದ್ದ ಗೋಲ್ಡಿಬ್ರಾರ್‌ ಈ ದಾಳಿಯ ಹೊಣೆ ಹೊತ್ತಿದ್ದಾನೆ.

ಇದನ್ನೂ ಓದಿ:Hasana: ಹಾಸನದಲ್ಲಿ ʼಗಣಪತಿ ವಿಸರ್ಜನೆ” ವೇಳೆ ಟ್ರಕ್‌ ಹರಿದು 9 ಮಂದಿ ಸಾವು

ಸನಾತನ ಧರ್ಮ ಹಾಗೂ ಹೊಂದೂ ನಂಬಿಕೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆದರೆ ದಾಳಿಯಾಗಲಿದೆ ಎಂದು ಎಚ್ಚರಿಕೆಯ ಸಂದೇಶವನ್ನು ಸೋಷಿಯಲ್‌ ಮೀಡಿಯಾದಲ್ಲಿ ನೀಡಲಾಗಿರುವ ಕುರಿತು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಅನುಸಾರ, ಈ ಪೋಸ್ಟ್‌ ಗೋಲ್ಡಿ ಬ್ರಾರ್‌ ಹಾಗೂ ಆತನ ಸದಸ್ಯರು ಪೋಸ್ಟ್‌ ಮಾಡಿದ್ದಾರೆ ಎನ್ನುವುದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ದಿಶಾ ಪಟಾನಿ ಮನೆ ಹೊರಭಾಗದಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇತ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

You may also like