Home » Odisha: ಪೊಲೀಸ್ ಕಾರಿನ ಕೀ ಕದ್ದು, ಮನೆಗೆ ಡ್ರಾಪ್ ಕೇಳಿದ ‘ಕುಡುಕರು!! ಮುಂದೇನಾಯ್ತು ನೀವೇ ನೋಡಿ

Odisha: ಪೊಲೀಸ್ ಕಾರಿನ ಕೀ ಕದ್ದು, ಮನೆಗೆ ಡ್ರಾಪ್ ಕೇಳಿದ ‘ಕುಡುಕರು!! ಮುಂದೇನಾಯ್ತು ನೀವೇ ನೋಡಿ

0 comments

Odisha: ಪೊಲೀಸರೆಂದರೆ ಎಲ್ಲರಿಗೂ ಭಯ. ಆತ ತಪ್ಪು ಮಾಡಿರಲಿ, ತಪ್ಪು ಮಾಡದಿರಲಿ, ಪೊಲೀಸರು ಒಂದು ಕ್ಷಣ ಎದುರಿಗೆ ಬಂದು ನಿಂತರೆ ಎಂತವನಿಗೆ ಕೂಡ ಪುಕು ಪುಕು ಎನ್ನುವುದು ಗ್ಯಾರೆಂಟಿ. ಆದರೆ ಕುಡುಕರು ಮಾತ್ರ ಈ ಒಂದು ಅಪವಾದದಿಂದ ಹೊರಗಿರುತ್ತಾರೆ. ಯಾಕೆಂದರೆ ಕುಡಿತದ ಅಮಲಿನಲ್ಲಿ ನಾವು ಯಾರೊಂದಿಗೆ ಹೇಗೆ ವ್ಯವಹರಿಸುತಿದ್ದೇವೆ ಎಂಬ ಯಾವ ಪರಿಜ್ಞಾನ ಅವರಿಗಿರುವುದಿಲ್ಲ. ಇದೀಗ ಅಂತದ್ದೇ ಒಂದು ಬಲು ಅಪರೂಪದ ಘಟನೆ ನಡೆದಿದ್ದು, ಇಬ್ಬರು ಕುಡುಕರು ಪೊಲೀಸರ ಕಾರಿನ ಕೀ ಕದ್ದು ಮನೆಗೆ ಡ್ರಾಪ್ ಕೇಳಿರುವ ಘಟನೆ ನಡೆದಿದೆ.

ಹೌದು, ಒಡಿಶಾದಲ್ಲಿ ಇಲ್ಲಿ ಇಬ್ಬರು ಭೂಪರು ಕಂಠಪೂರ್ತಿ ಮದ್ಯಸೇವಿಸಿ ಪೊಲೀಸರನ್ನೇ ಮನೆಗೆ ಡ್ರಾಪ್ ಮಾಡುವಂತೆ ಕೇಳಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಪೊಸರೊಂದಿಗೆ ಮಾತನಾಡುತ್ತ ಈ ಕುಡುಕರು ಅವರ ಕಾರಿನ ಕೀ ಕದ್ದಿದ್ದಾರೆ. ಬಳಿಕ ಪೊಲೀಸರ ಬೋಲೆರೋ ಕಾರಿನೊಳಗೆ ಅವರು ಕುಳಿತಿದ್ದಾರೆ. ವಾಹನದ ಕೀ ಕೊಡುವಂತೆ ಕೇಳಿದರೂ ಕೊಡದ ಕುಡುಕರು, ಈ ಕಾರು ನಮ್ಮ ತೆರಿಗೆ ಹಣದಿಂದ ಖರೀದಿ ಮಾಡಿದ್ದು, ಹೀಗಾಗಿ ಇದು ನಮಗೆ ಸೇರಿದ್ದು. ನಮ್ಮನ್ನು ಮನೆಗೆ ಡ್ರಾಪ್ ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ವಾದಿಸಿದ್ದಾನೆ. ಅದು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದಾಗ ನಾವೇನೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿಲ್ಲ. ಬದಲಿಗೆ ನಮ್ಮನ್ನು ಮನೆಗೆ ಬಿಡುವಂತೆ ಕೇಳುತ್ತಿದ್ದೇವೆ. ಅದೇನೂ ತಪ್ಪಲ್ಲವಲ್ಲ ಎಂದು ವಾದಿಸಿದ್ದಾರೆ.

ಇದನ್ನೂ ಓದಿ:Chitradurga : ರೇಣುಕಾ ಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ?!

ಈ ವೇಳೆ ತಾಳ್ಮೆ ಕಳೆದುಕೊಂಡ ಪೊಲೀಸರು ಬಲವಂತವಾಗಿ ಅವರ ಜೇಬಿಗೆ ಕೈ ಹಾಕಿ ಕೀ ಹುಡುಕಿದ್ದಾರೆ. ಈ ವೇಳೆ ಕುಡುಕ ಯುವಕರು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಇಬ್ಬರನ್ನೂ ಬಂಧಿಸಿ ದಂಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.

You may also like