15
Income tax returns filing deadline: ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (Income tax returns) ಸಲ್ಲಿಸಲು ಕೊನೆಯ ದಿನಾಂಕವನ್ನು ಕೇವಲ ಒಂದು ದಿನ ವಿಸ್ತರಿಸಿದೆ. ಆದ್ದರಿಂದ, ಐಟಿಆರ್ ಸಲ್ಲಿಸಲು ಈ ಮೊದಲು ಸೆಪ್ಟೆಂಬರ್ 15 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಇದೀಗ ಕೊನೆಯ ದಿನಾಂಕ ಗಡುವು ವಿಸ್ತರಿಸಿ ಈಗ ಸೆಪ್ಟೆಂಬರ್ 16, 2025 ಆಗಿದೆ.
ಈ ಮಧ್ಯೆ ವೆಬ್ಸೈಟ್ ಕ್ರ್ಯಾಷ್ ಆಗಿರುವುದೂ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಎದುರಾಗಿ ಐಟಿಆರ್ (ITR ) ಸಲ್ಲಿಕೆ ವಿಳಂಬವಾಗಿತ್ತು. ಹಾಗಾಗಿ ಗಡುವು ವಿಸ್ತರಣೆ ಮಾಡುವಂತೆ ಮನವಿಗಳು ಕೂಡ ಬಂದಿತ್ತು. ಇದೀಗ ಒಂದು ದಿನ ದಿನ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ.
ಐಟಿಆರ್ ಸಲ್ಲಿಕೆಗೆ ಇರುವ ಡೆಡ್ಲೈನ್ ಒಳಗೆ ಪಾವತಿಸದೆ ವಿಳಂಬ ಮಾಡಿದರೆ ವಿವಿಧ ದಂಡಗಳು ಕಾದಿರುತ್ತವೆ. 1,000 ರೂನಿಂದ ಹಿಡಿದು 5,000 ರೂವರೆಗೆ ತಡಪಾವತಿ ಶುಲ್ಕ ತೆರಬೇಕಾಗುತ್ತದೆ.
